Publish Date: Fri, 27 Jan 2023 (10:29 IST)
Updated Date: Fri, 27 Jan 2023 (10:32 IST)
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಒಂದು ಪ್ಯಾಕೆಟ್ ಗೋಧಿ ಹಿಟ್ಟಿನ ಬೆಲೆ 3 ಸಾವಿರಕ್ಕೆ ಮಾರಾಟವಾಗುತ್ತಿದೆ. ವಿದ್ಯುತ್ ನಿರಂತರವಾಗಿ ಕೈಕೊಡುತ್ತಿರುವುದರಿಂದ ಇಡೀ ಪಾಕ್ ಕಗ್ಗತ್ತಲಲ್ಲಿ ಮುಳುಗಿದೆ.
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಉಂಟಾಗಿದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಶ್ರೀಲಂಕಾ ಅನುಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಪಾಕಿಸ್ತಾನಕ್ಕೂ ಎದುರಾಗಿದೆ.
ವಿದೇಶಗಳಿಂದ ವಸ್ತು, ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ಕೊರತೆಯೂ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿದೆ. ಆಹಾರ ಬಿಕ್ಕಟ್ಟು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿರುದ್ಧ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ.