Select Your Language

Notifications

webdunia
webdunia
webdunia
webdunia

ಮಹಿಳಾ ಗಗನಯಾತ್ರಿ ಬಾಹ್ಯಾಕಾಶಕ್ಕೆ!

ಮಹಿಳಾ ಗಗನಯಾತ್ರಿ ಬಾಹ್ಯಾಕಾಶಕ್ಕೆ!
ಅಮೇರಿಕಾ , ಬುಧವಾರ, 22 ಡಿಸೆಂಬರ್ 2021 (06:40 IST)
ವಾಷಿಂಗ್ಟನ್ :  ಇದೀಗ ಅಮೇರಿಕಾದ ಸ್ಪೇಸ್ ಎಕ್ಸ್ ಕಂಪನಿ ರಷ್ಯಾದ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆ ಮಾಡಿ ಆಶ್ಚರ್ಯ ಮೂಡಿಸಿದೆ.

ನಾಸಾ ಹಾಗೂ ರಷ್ಯಾದ ಸ್ಪೇಸ್ ಏಜೆನ್ಸಿ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಲ್ಲಿ ಗಗನಯಾತ್ರಿಯನ್ನು ಉಡಾಯಿಸುವ ಯೋಜನೆ ನಡೆದಿದೆ.

ಒಪ್ಪಂದದ ಪ್ರಕಾರ ಬಾಹ್ಯಾಕಾಶ ನೌಕೆಯಲ್ಲಿ ರಷ್ಯಾದ ಮೊದಲ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಪ್ರಯಾಣಿಸಲಿದ್ದಾರೆ. 2022ರಲ್ಲಿ ಸ್ಪೇಸ್ ಎಕ್ಸ್ ಕ್ರ್ಯೂ-5 ಮಿಷನ್ನಲ್ಲಿ ಗಗನಯಾತ್ರಿಯನ್ನು ಉಡಾವಣೆ ಮಾಡುವ ವಿಷಯವನ್ನು ಸ್ಪೇಸ್ ಸ್ಟೇಶನ್ ಪ್ರೋಗ್ರಾಮ್ ಮ್ಯಾನೇಜರ್ ಜೋಯಲ್ ಮೊಂಟಲ್ಬಾನೋ ತಿಳಿಸಿದರು.

2025ರ ಹೊತ್ತಿಗೆ ಬಾಹ್ಯಾಕಾಶ ನಿರ್ವಹಣೆಯಲ್ಲಿ ರಷ್ಯಾ ಹಾಗೂ ಅಮೆರಿಕ ಜಂಟಿಯಾಗಿ ಕಾರ್ಯ ನಿರ್ವಹಿಸುವುದರ ಬಗ್ಗೆ ಸುಳಿವನ್ನೂ ನೀಡಿದ್ದಾರೆ. 

ವಾಷಿಂಗ್ಟನ್ ಹಾಗೂ ಮಾಸ್ಕೋ ನಡುವಿನ ಒತ್ತಡದ ಸಂಬಂಧ ಬಾಹ್ಯಾಕಾಶಕ್ಕೆ ವಿಸ್ತರಿಸಿದ್ದರೂ, ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಮಾಸ್ಕೋಗೆ ಭೇಟಿ ನೀಡಿದಾಗ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದದ ಬಗ್ಗೆ ಯೋಜನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲಾಕ್ಮೇಲ್ : ವಿದ್ಯಾರ್ಥಿಯನ್ನು ಕೊಂದ 10ನೇ ತರಗತಿ ವಿದ್ಯಾರ್ಥಿನಿಯರು!