Select Your Language

Notifications

webdunia
webdunia
webdunia
webdunia

ಕೊಲಂಬಿಯಾದಲ್ಲಿ ಸ್ಫೋಟಕ ದಾಳಿ !

ಕೊಲಂಬಿಯಾದಲ್ಲಿ ಸ್ಫೋಟಕ ದಾಳಿ !
ಬೊಗೊಟಾ , ಶನಿವಾರ, 3 ಸೆಪ್ಟಂಬರ್ 2022 (13:25 IST)
ಬೊಗೊಟಾ : ನೈಋತ್ಯ ಕೊಲಂಬಿಯಾದಲ್ಲಿ ಶುಕ್ರವಾರ ಸ್ಫೋಟಕಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ತಿಳಿಸಿದ್ದಾರೆ.

ಅಧ್ಯಕ್ಷ ಗುಸ್ಟಾವೋ ಪೆಟ್ರೋ ಅಧಿಕಾರ ವಹಿಸಿಕೊಂಡ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಪೆಟ್ರೋ, 8 ಪೊಲೀಸರ ಸಾವಿಗೆ ಕಾರಣವಾದ ಸ್ಫೋಟಕ ದಾಳಿಯನ್ನು ನಾನು ಬಲವಾಗಿ ತಿರಸ್ಕರಿಸುತ್ತೇನೆ ಎಂದು ಬರೆದಿದ್ದಾರೆ.

ಇದು ಪೊಲೀಸ್ ಭದ್ರತೆಯ ವಿರುದ್ಧದ ದಾಳಿಯಾಗಿದೆ. ಪೊಲೀಸರನ್ನು ಸ್ಫೋಟಕಗಳಿಂದ ಹಾಗೂ ಬಂದೂಕುಗಳಿಂದ ಕೊಲ್ಲಲಾಗಿದೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಬಾಬಾ ಮುಖವಾಡ ಕಳಚಿತು : ಬಾಬಾನ ವಿರುದ್ಧ FIR ದಾಖಲು