Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂಗ್ಲೆಂಡ್`ನ ಪುರುಷ..!

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂಗ್ಲೆಂಡ್`ನ ಪುರುಷ..!
ಲಂಡನ್ , ಭಾನುವಾರ, 9 ಜುಲೈ 2017 (20:26 IST)
ಹೆಣ್ಣು ಮಕ್ಕಳು ತಾಯಿಯಾಗುವುದು ಪ್ರಕೃತಿ ನಿಯಮ. ಆದರೆ, ಆಗಾಗ್ಗೆ ಗಂಡೂ ಸಹ ಗರ್ಭ ಧರಿಸಿದ ಬಗ್ಗೆ ಕೇಳುತ್ತಿರುತ್ತೇವೆ. ಬ್ರಿಟನ್ನಿನ ವ್ಯಕ್ತಿಯೊಬ್ಬ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣು ಮಗುವಿಗೇ ಜನ್ಮ ನೀಡಿದ್ದಾನೆ.
 

ವೀರ್ಯ ದಾನಿಯ ಮೂಲಕ ಗರ್ಭ ಧರಿಸಿದ್ದಾಗಿ ದೊಡ್ಡ ಸುದ್ದಿ ಮಾಡಿದ್ದ ಹೇಡನ್ ಕ್ರಾಸ್ ಎಂಬಾತ ಿದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ. ಜೂನ್ 16ರಂದು ಗ್ಲೌಸಸ್ಟರ್ ಶೇರ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಹೇಡನ್ ತನ್ನ ಮಗಳು ಟ್ರಿನಿಟಿ ನನ್ನ ಏಂಜಲ್ ಎಂದು ಹೇಳಿಕೊಂಡಿದ್ದಾನೆ.

ಅಂದಹಾಗೆ, ಈತನಲ್ಲಿ ಗರ್ಭಕೋಶ ಹೇಗೆ ಬಂತು ಎಂದು ನೀವು ಯೋಚಿಸುತ್ತಿರಬಹುದು. ಅದಕ್ಕೂ ಉತ್ತರ ಇಲ್ಲಿದೆ. ಹೇಡನ್ ಕ್ರಾಸ್ ಹುಟ್ಟಿನಿಂದ ಗಂಡಲ್ಲ ಹೆಣ್ಣು. ಹಾರ್ಮೋನ್ ಚಿಕಿತ್ಸೆ ಮೂಲಕ ಹೆಣ್ಣಿನ ರೂಪದಿಂದ ಗಂಡಾಗಿ ಬದಲಾಗಿರುವ ಹೇಡನ್ ಗರ್ಭಕೋಶವನ್ನ ಹಾಗೆಯೇ ಉಳಿಸಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯೇ..?