Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯೇ..?

ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯೇ..?
ನವದೆಹಲಿ , ಭಾನುವಾರ, 9 ಜುಲೈ 2017 (19:21 IST)
ಅವರು ಮಾತನಾಡುತ್ತಿದ್ದರೆ ಒಂದು ಕ್ಷಣ ನಿಂತು ಕೇಳಬೇಕೆನ್ನಿಸುತ್ತದೆ. ಅವರನ್ನ ಕಂಡೊಡನೆ ಕಣ್ಣರಳುತ್ತದೆ. ಅವರ ಸುದ್ದಿ ಮಾಡದೇ ಮಾಧ್ಯಮಗಳು ಇರುವುದೇ ಇಲ್ಲ. ಇದನ್ನೆಲ್ಲ ಗಮನಿಸಿದರೆ ಅವರ ಸುತ್ತ ಅಯಸ್ಕಾಂತೀಯ ಶಕ್ತಿ ಇದೆಯಾ ಅನ್ನಿಸದಿರದು.  ನಾವು ಹೇಳುತ್ತಿರೋದು ಬೇರಾರ ಬಗ್ಗೆಯೂ ಅಲ್ಲ. ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಬಗ್ಗೆ. ಹಾಗಾದರೆ, ನರೇಂದ್ರಮೋದಿ ದೇಶ ಕಂಡ ಪ್ರಧಾನಿಗಳಲ್ಲೇ ಅತ್ಯಂತ ಜನಪ್ರಿಯ ಪ್ರಧಾನಿಯಾ..? ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ.

ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಫಾಲೋವರ್`ಗಳ ಆಧಾರದ ಮೇಲೇ ನಾಯಕರ ಖ್ಯಾತಿ-ಕುಖ್ಯಾತಿಗಳನ್ನ ನಿರ್ಧರಿಸಲಾಗುತ್ತಿದೆ. ಒಂದು ಪಕ್ಷ ಮಹಾತ್ಮಾ ಗಾಂಧಿ ಮತ್ತು ಜವಹರಲಾಲ್ ಸೋಶಿಯಲ್ ಮೀಡಿಯಾ ಬಳಸಿದ್ದರೆ..? ಅವರ ಜನಪ್ರಿಯತೆ ಯಾವ ಮಟ್ಟಕ್ಕೆ ಇರುತ್ತಿತ್ತು ಯೋಚನೆ ಮಾಡಿ. ಅವರಿಗೆ ಎಷ್ಟು ಹಿಂಬಾಲಕರಿರುತ್ತಿದ್ದರು..? ಅವರ ದೃಷ್ಟಿಕೋನವನ್ನ ಜನರಿಗೆ ತಲುಪಿಸಲು ಫೇಸ್ಬುಕ್ ಮತ್ತು ಟ್ವಿಟ್ಟರ್`ಗಳಲ್ಲಿ ಹೇಗೆ ಬಳಸುತ್ತಿದ್ದರು..? ಬೇರೆ ಸೆಲೆಬ್ರಿಟಿಗಳ ರೀತಿ ಅವರನ್ನೂ ಟ್ರೋಲ್ ಮಾಡಿದ್ದರೆ. ನಿಂದಿಸಿದ್ದರೆ ಪ್ರತಿಕ್ರಿಯೆ ಹೇಗಿರುತ್ತಿತ್ತು. ಅವರ ಜನಪ್ರಿಯತೆ ಮತ್ತಷ್ಟು ಬೆಳೆದುಬಿಡುತ್ತಿತ್ತು.

ಪ್ರಧಾನಮಂತ್ರಿ ನರೇಂದ್ರಮೋದಿ ಟ್ವಿಟ್ಟರ್`ನಲ್ಲಿ 18 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನ ಹೊಂದಿರುವ ನಾಯಕರಲ್ಲಿ ಮೋದಿ 2ನೆಯವರು. ಇದರರ್ಥ ಅವಶ್ಯಕತೆ ಬಿದ್ದಾಗ 18 ಮಿಲಿಯನ್ ಜನರನ್ನ ಉದ್ದೇಶಿಸಿ ಮಾತನಾಡಬಹುದು. ಗಾಂಧಿ ಒಂದು ಸಮಾವೇಶವನ್ನುದ್ದೇಶಿಸಿ ಮಾತನಾಡುವಾಗ ಕೆಲವೇ ಕೆಲವು ಸಾವಿರದಷ್ಟು ಜನ ಮಾತ್ರ ಇರುತ್ತಿದ್ದರು.  ಮೀಡಿಯಾ ಉನ್ಮಾದವಿಲ್ಲದೆ ಸಮಾವೇಶ ಅಲ್ಲಿಯೇ ಮುಗಿದುಹೋಗುತ್ತಿತ್ತು. ಆದರೂ ಅವರು ಈಗಲೂ ದೇಶದ ಜನಪ್ರಿಯ ನಾಯಕರಾಗಿಯೇ ಮನಸ್ಸಿನಲ್ಲಿ ಉಳಿದಿದ್ದಾರೆ. ಈ ಮೂಲಕ ವಿಭಿನ್ನ ಕಾಲಮಾನಗಳಲ್ಲಿ ರಾಜಕಾರಣಿಗಳ ಜನಪ್ರಿಯತೆ ಹೇಗಿತ್ತು ಎಂಬುದನ್ನ ಅಳೆಯಬಹುದಾಗಿದೆ.

1952ರಲ್ಲಿ ನಡೆದ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ಕೆಲ ಸತ್ಯ ಸಂಗತಿಗಳ ಬಗ್ಗೆ ಬಹುಜನರಿಗೆ ತಿಳಿದಿರುವುದಿಲ್ಲ. ದೇಶಾದ್ಯಂತ ಪ್ರಯಾಣ ಮಾಡಿ ಜನರ ಬಳಿ ಮತಯಾಚನೆ ಮಾಡುವ ಸಂದರ್ಭ ಜವಹರಲಾಲ್ ನೆಹರು ಅತ್ಯಂತ ಅಸುರಕ್ಷಿತ ಭಾವನೆಯಿಂದಲೇ ಹೊರಟಿದ್ದರು. 1952ರಲ್ಲಿ ಅತಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನೆಹರು 17 ವರ್ಷಗಳ ಕಾಲ ದೇಶವನ್ನಾಳಿದರು.62 ವರ್ಷಗಳ ಬಳಿಕ ನರೇಂದ್ರಮೋದಿ ಸಹ ಇದನ್ನೇ ಮಾಡಿದರು. ಈ ಸಂದರ್ಭ ಮೋದಿ ಮಾಡಿದ ಭಾಷಣಗಳು ವಿಡಿಯೋಗಳಲ್ಲಿ ದಾಖಲಾದವು. ಆದರೆ, 1952ರ ಘಟನೆಗಳು ದಾಖಲಾಗಿಲ್ಲ.

ಸಂಪೂರ್ಣ ಎರಡು ವರ್ಷವೂ ಪ್ರಧಾನಮಂತ್ರಿ ಹುದ್ದೆಯಲ್ಲಿರದ ಲಾಲೂ ಬಹದ್ದೂರ್ ಶಾಸ್ತ್ರೀ ಈಗಲೂ ದೇಶದ ಜನಪ್ರಿಯ ಪ್ರಧಾನಮಂತ್ರಿಯೇ. 1965ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿನ ಜಯ ಶಾಸ್ತ್ರೀ ಹಿರಿಮೆಯಾಗಿದೆ. ಅದೇ ರೀತಿ ಬಾಂಗ್ಲಾದೇಶ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನವನ್ನ ಹತೋಟಿಯಲ್ಲಿಟ್ಟಿದ್ದು, 1971ರಲ್ಲಿ ಚುನಾವಣೆಯಲ್ಲಿ ಇಂದಿರಾಗಾಂಧಿಯ ಅಭೂತಪೂರ್ವ ಗೆಲುವಿಗೆ ಕಾರಣವಾಯಿತು. ತುರ್ತು ಪರಿಸ್ಥಿತಿ ಸಂದರ್ಭ ಅಪಾರ ಪ್ರಮಾಣದ ವಿರೋಧ ವ್ಯಕ್ತವಾದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. 1980ರ ಅಭೂತಪೂರ್ವ ಗೆಲುವೇ ಇದಕ್ಕೆ ಸಾಕ್ಷಿ.. ಅದೇ ಸಾಲಿನಲ್ಲಿ ಇಂದಿರಾಗಾಂಧಿ ಹತ್ಯೆಯಾದ ಬಳಿಕ ಅವರ ಜನಪ್ರಿಯತೆಯಲ್ಲೇ 1984ರಲ್ಲಿ ರಾಜೀವ್ ಗಾಂಧಿ ಸಹ ಚುನಾವಣೆಯಲ್ಲಿ ಗೆದ್ದು ದೇಶದ ಚುಕ್ಕಾಣಿ ಹಿಡಿದರು. ಇಂದಿರಾಗಾಂಧಿಯವರೇ ಜನಮಾನಸದ ಸೆಳೆತವಿತ್ತು. ಅವರ ಜನಪ್ರಿಯತೆಯ ಎಂದಿಗೂ ಮರೆಯುವಂತಿಲ್ಲ.

ಆ ಬಳಿಕ ದೇಶವನ್ನ 21ನೇ ಶತಮಾನಕ್ಕೆ ಕೊಂಡೊಯ್ಯಲು ಸಿದ್ಧವಾಗಿದ್ದವರು ಯಂಗ್ ಅಂಡ್ ಎನರ್ಜೆಟಿಕ್, ನೀಲಿ ಕಂಗಳ ಹುಡುಗ ರಾಜೀವ್ ಗಾಂಧಿ. ಆದರೆ, ರಾಜೀವ್ ಗಾಂಧಿ ಮೇಲೆ ಬಂದ ರಾಮ್ ಲಲ್ಲಾ ಮತ್ತು ಮಂಡಳ ಸಮಿತಿ, ಬೋಫೋರ್ಸ್ ಹಗರಣಗಳು ಸೇರಿದಂತೆ ಕೆಲ ಆರೋಪಗಳು ರಾಜೀವ್ ಗಾಂಧಿ ಜನಪ್ರಿಯತೆ ಕುಗ್ಗಿಸಿತ್ತು. ಮತ್ತೆ ರಾಜೀವ್ ಆ ಜನಪ್ರಿಯತೆಯನ್ನ ಮರು ಸಂಪಾದಿಸಲು ಸಾಧ್ಯವಾಗಲೇ ಇಲ್ಲ.

ತಮ್ಮ ಸಜ್ಜನಿಕೆ, ಮೃದು ಸ್ವಭಾವದಿಂದ ವಿರೋಧ ಪಕ್ಷದವರು ಸೇರಿದಂತೆ ದೇಶದ ಎಲ್ಲ ಜನರ ಮೆಚ್ಚುಗೆ ಪಡೆದು ಜನಪ್ರಿಯತೆ ಗಳಿಸಿದ್ದ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ. ಮೂರು ಬಾರಿ ಪ್ರಧಾನಿ ಹುದ್ದೆಗೇರಿದ್ದರು. ಆದರೆ, ಒಮ್ಮೆ 13 ದಿನ ಮತ್ತೊಮ್ಮೆ 13 ತಿಂಗಳು ಸೇರಿ ಎರಡು ಬಾರಿ ಅಲ್ಪಾವಧಿಗೆ ಅಧಿಕಾರ ಕಳೆದುಕೊಂಡಿದ್ದರು. ಮೂರನೇ ಬಾರಿಗೆ 5 ವರ್ಷ ಪೂರೈಸಿದರು. ತಮ್ಮ ಅಧಿಕಾರವಧಿಯಲ್ಲಿ ಮಿತ್ರ ಪಕ್ಷಗಳು, ವಿಪಕ್ಷಗಳನ್ನ ಒಗ್ಗೂಡಿಸಿಕೊಂಡು ಮುನ್ನಡೆದದ್ದು ಅವರ ಹೆಗ್ಗಳಿಕೆ.

ಇದೀಗ, ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿದಿಡಿರುವ ನರೇಂದ್ರಮೋದಿ ಬಿಜೆಪಿಯನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಾಡುತ್ತಿದೆ. ನೋಟ್ ಬ್ಯಾನ್, ಸರ್ಜಿಕಲ್ ಸ್ಟ್ರೈಕ್, ಮುಖ್ಯಮಂತ್ರಿಯಾಗಿ ಯೋಗಿ ಆಯ್ಕೆ, ಜಿಎಸ್`ಟಿ, ಇಸ್ರೇಲ್ ಜೊತೆಗಿನ ಸಂಬಂಧ ವೃದ್ಧಿ ಸೇರಿದಂತೆ ನರೇಂದ್ರ ಮೋದಿ ಕೈಗೊಂಡ ಧೈರ್ಯಶಾಲಿ ನಿರ್ಧಾರಗಳು 2002ರ ಘಟನೆಯನ್ನು ಜನ ನೆನಪಿಸಿಕೊಳ್ಳದಂತೆ ಮಾಡಿವೆ. ಮೋದಿ ದೇಶಕ್ಕೆ ಅಗತ್ಯವಿರುವ ಮನಸ್ಥಿತಿಯನ್ನ ಸೃಷ್ಟಿಸಿದ್ದಾರೆ. ಅದು ದೊಡ್ಡ ವಿಷಯವೇ ಸರಿ.
ಈಗಲೂ ನರೇಂದ್ರ ಮೋದಿ ದೇಶದ ಎಲ್ಲ ಪ್ರಧಾನಿಗಿಂತಲೂ ಗ್ರೇಟ್ ಎಂದು ಕರೆಯಲು ಸ್ವಲ್ಪ ಹಿಂಜರಿಕೆ ಇರಬಹುದು. 2019ರ ಚುನಾವಣೆ ಗೆದ್ದರೆ ಖಂಡಿತಾ ಆ ಸ್ಥಾನಕ್ಕೇರಲಿದ್ದಾರೆ. ಅದಾಗಲೇ 2019ರ ಚುನಾವಣೆಯತ್ತ ಮೋದಿ ಚಿತ್ತ ನೆಟ್ಟಿರುವುದು ನಿಶ್ಚಿತ.

ಕ್ಲಿಕ್ ಮಾಡಿ.. ವೋಟ್ ಮಾಡಿ.. ಭಾರತ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ ಯಾರು..?

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಪೋರ್ಟ್ ನಲ್ಲಿ ಸಿಕ್ತು ರಾಶಿ ರಾಶಿ ಸೆಕ್ಸ್ ಟಾಯ್ಸ್!