ಡೋನಾಲ್ಡ್‌ ಟ್ರಂಪ್‌ ಜೊತೆ ಮುನಿಸಿಕೊಂಡ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಘೋಷಿಸಿದ ಇಲಾನ್ ಮಸ್ಕ್

Sampriya
ಭಾನುವಾರ, 6 ಜುಲೈ 2025 (10:29 IST)
Photo Credit X
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಜೊತೆ ಮುನಿಸಿಕೊಂಡ ಬೆನ್ನಲ್ಲೇ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉದ್ಯಮಿ ಇಲಾನ್‌ ಮಸ್ಕ್ 'ಅಮೆರಿಕ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ.

ತಮ್ಮದೇ ಒಡೆತದನಲ್ಲಿರುವ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿರುವ ಮಸ್ಕ್, ನಿಮ್ಮ ಸ್ವಾತಂತ್ರ್ಯವನ್ನು ಹಿಂದಿರುಗಿಸಲು ಅಮೆರಿಕ ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಈ ಮೊದಲು ಹೊಸ ಪಕ್ಷ ಸ್ಥಾಪನೆಗೆ ಸಂಬಂಧಿಸಿದಂತೆ ಮಸ್ಕ್, ಎಕ್ಸ್ ಪೋಲ್ ಮೂಲಕ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದರು.

ಕಳೆದ ವರ್ಷ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದ್ದ ಇಲಾನ್ ಮಸ್ಕ್, ದೇಣಿಗೆಯನ್ನು ನೀಡಿದ್ದರು. ಬಳಿಕ ಎರಡನೇ ಅವಧಿಗೆ ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದ ಟೆಸ್ಲಾ ಮಾಲೀಕ ಇಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ)ಯ ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶವಾಗಿತ್ತು.

ಟ್ರಂಪ್ ಜತೆಗಿನ ಭಿನಾಭಿಪ್ರಾಯದಿಂದಾಗಿ ಡಿಒಜಿಇ ಮುಖ್ಯಸ್ಥ ಸ್ಥಾನವನ್ನು ಮಸ್ಕ್ ತೊರೆದಿದ್ದರು. ಇದರಿಂದಾಗಿ ಇಬ್ಬರ ನಡುವೆ ಉಂಟಾಗಿರುವ ಮನಸ್ತಾಪವು ದ್ವೇಷ ಸಾಧಿಸುವ ಮಟ್ಟಕ್ಕೆ ಬೆಳೆದಿತ್ತು. ಟ್ರಂಪ್‌ ಅವರ ತೆರಿಗೆ ಮತ್ತು ಖರ್ಚು ಮಸೂದೆಯನ್ನು ವಿರೋಧಿಸಿ ಮಸ್ಕ್‌ ಟೀಕೆ ಮಾಡಲು ಆರಂಭಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಪರಸ್ಪರ ಅರೋಪ–ಪ್ರತ್ಯಾರೋಪ ನಡೆಸಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದು ಸಿಗರೇಟ್ ಕಿಡಿಯಿಂದ ಭಸ್ಮವಾಯಿತು 7 ಗೂಡಂಗಡಿಗಳು

ಪ್ರಧಾನಿ ಮೋದಿ ಉಡುಪಿಗೆ ಬರುತ್ತಿದ್ದಂತೇ ಸಚಿವ ದಿನೇಶ್ ಗುಂಡೂರಾವ್ ಮೂಲಕ ಸಿದ್ದರಾಮಯ್ಯ ತಲುಪಿಸಿದ್ದೇನು

ಉಡುಪಿಯಲ್ಲಿ ಪ್ರಧಾನಿ ಮೋದಿ: ಚಿತ್ರ ಹಿಡಿದು ನಿಂತಿದ್ದ ಮಕ್ಕಳಿಗೆ ಮೋದಿ ಹೇಳಿದ್ದೇನು

ಪ್ರಧಾನಿ ಮೋದಿ ಇನ್ನು ಭಾರತ ಭಾಗ್ಯವಿಧಾತ: ಉಡುಪಿಯಲ್ಲಿ ವಿಶೇಷ ಬಿರುದು ನೀಡಿ ಪುತ್ತಿಗೆ ಶ್ರೀ

ಮೋದಿಗಾಗಿ ಬಿಸಿಲಲ್ಲಿ ನಿಂತು ಕಾಯುತ್ತಿದ್ದ ವಿದ್ಯಾರ್ಥಿಗಳು: ನಿರಾಸೆ ಮಾಡದ ಪ್ರಧಾನಿ

ಮುಂದಿನ ಸುದ್ದಿ
Show comments