ಪ್ಯಾರಿಸ್ : ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಎನಿಸಿಕೊಂಡಿದ್ದ 118 ವರ್ಷದ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಅವರು ಮಂಗಳವಾರ ನಿಧರಾಗಿದ್ದಾರೆ.
ವಿಶ್ವದ ಅತ್ಯಂತ ಹಿರಿಯ ಮಹಿಳೆ ಮೊದಲ ಮಹಾಯುದ್ಧಕ್ಕೂ 1 ದಶಕದ ಮೊದಲೇ 1904ರ ಫೆಬ್ರವರಿ 11 ರಂದು ದಕ್ಷಿಣ ಫ್ರಾನ್ಸ್ನಲ್ಲಿ ಜನಿಸಿದ್ದರು. ರಾಂಡನ್ ಮಂಗಳವಾರ ತಮ್ಮ 118 ನೇ ವಯಸ್ಸಿನಲ್ಲಿ ಟೌಲೋನ್ನಲ್ಲಿರುವ ನರ್ಸಿಂಗ್ ಹೊಮ್ನಲ್ಲಿ ನಿದ್ರೆಗೆ ಜಾರಿದ್ದ ವೇಳೆಯೇ ಸಾವನ್ನಪ್ಪಿದ್ದಾರೆ ಎಂದು ನರ್ಸಿಂಗ್ ಹೋಮ್ ವಕ್ತಾರ ಡೇವಿಡ್ ಟವೆಲ್ಲಾ ತಿಳಿಸಿದ್ದಾರೆ.
ರಾಂಡನ್ ಸಾವು ತುಂಬಾ ನೋವು ತಂದಿದೆ. ಆದರೆ ಆಕೆಯ ಪ್ರೀತಿಯ ಸಹೋದರನನ್ನು ಸೇರುವುದು ಆಕೆಯ ಬಯಕೆಯಾಗಿತ್ತು. ಆಕೆಯ ಸಾವು ಒಂದು ವಿಮೋಚನೆಯಾಗಿದೆ ಎಂದು ಟವೆಲ್ಲಾ ಹೇಳಿದ್ದಾರೆ.