Select Your Language

Notifications

webdunia
webdunia
webdunia
webdunia

ಇಕ್ವೆಡಾರ್‌ನಲ್ಲಿ 6.7 ತೀವ್ರತೆಯ ಭೂಕಂಪ: ಸುನಾಮಿ ಬೆದರಿಕೆ ಇಲ್ಲ

ಇಕ್ವೆಡಾರ್‌ನಲ್ಲಿ 6.7 ತೀವ್ರತೆಯ ಭೂಕಂಪ: ಸುನಾಮಿ ಬೆದರಿಕೆ ಇಲ್ಲ
ಕ್ವಿಟೊ, ಇಕ್ವೆಡಾರ್: , ಬುಧವಾರ, 18 ಮೇ 2016 (15:52 IST)
ಪ್ರಬಲ ಭೂಕಂಪ ಇಂದು ನಸುಕಿನಲ್ಲಿ ಈಕ್ವೆಡಾರ್‌‌ನಲ್ಲಿ ಅಪ್ಪಳಿಸಿದೆ ಎಂದು ಅಮೆರಿಕ ಬೌಗೋಳಿಕ ಸಮೀಕ್ಷೆ ತಿಳಿಸಿದೆ. ಈಕ್ವೆಡಾರ್ ರಾಷ್ಟ್ರೀಯ ಬೌಗೋಳಿಕ ಸಂಸ್ಥೆ ಈ ಭೂಕಂಪದ ತೀವ್ರತೆಯನ್ನು 6.8 ಎಂದು ಅಳತೆ ಮಾಡಿದ್ದು, ಮುಂಜಾನೆ 2.57 ಸ್ಥಳೀಯ ಕಾಲಮಾನದಲ್ಲಿ ದಕ್ಷಿಣ ಅಮೆರಿಕದ ಪಶ್ಚಿಮ ಮನಾಬಿ ಪ್ರದೇಶದಲ್ಲಿ ಅಪ್ಪಳಿಸಿದೆ.
 
ಕೇವಲ ಒಂದು ತಿಂಗಳ ಹಿಂದೆ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ 660 ಜನರು ಮೃತಪಟ್ಟಿದ್ದರು. ಭೂಕಂಪದಿಂದ ಯಾವುದೇ ಸುನಾಮಿ ಬೆದರಿಕೆ ಉದ್ಭವಿಸಿಲ್ಲ ಎಂದು ಅಮೆರಿಕ ಬೌಗೋಳಿಕ ತಜ್ಞರು ಹೇಳಿದ್ದಾರೆ. ಯಾವುದೇ ಸಾವು ನೋವು ಅಥವಾ ಗಂಭೀರ ಹಾನಿ ಸಂಭವಿಸಿರುವುದು ಇದುವರೆಗೆ ಪತ್ತೆಯಾಗಿಲ್ಲ.
 
ಭೂಕಂಪ 32 ಕಿಮೀ ಆಳದಲ್ಲಿ ಸಂಭವಿಸಿದ್ದು, ಅದರ ಕೇಂದ್ರಬಿಂದು ಕ್ವಿಟೊದ 136 ಕಿಮೀ ವಾಯವ್ಯಕ್ಕಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರದ ಮದ: ತರಕಾರಿ ಮಾರುವ ಆದಿವಾಸಿ ಮಹಿಳೆಯನ್ನು ಒದ್ದ ಬಿಜೆಪಿ ಶಾಸಕ