Webdunia - Bharat's app for daily news and videos

Install App

ಸೆಕ್ಸ್ ವೇಳೆ ಕಾಂಡೋಮ್ನಲ್ಲಿ ರಂಧ್ರ ಮಾಡಿದ ಪ್ರಿಯತಮೆ! ಹೀಗೆ ಮಾಡಿದ್ದಾದ್ರು ಯಾಕೆ?

Webdunia
ಶುಕ್ರವಾರ, 6 ಮೇ 2022 (12:23 IST)
ಬರ್ಲಿನ್ : ಪ್ರೀತಿ ಅನ್ನೋದು ಕುರುಡು ಅಂತಾರೆ. ಎಷ್ಟೋ ಸಲ ಪ್ರೀತಿಸಿದವರು ಮದುವೆಯಾಗುವುದಿಲ್ಲ.

ಹುಡುಗಿ ಮನೆ ಅಥವಾ ಹುಡುಗ ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸುವುದು ಉಂಟು. ಹೀಗಾದಾಗ ಕೆಲವೊಮ್ಮೆ ಯುವಕ ಹಾಗೂ ಯುವತಿ ಪರಾರಿಯಾಗಿ ಮದುವೆಯಾಗುತ್ತಾರೆ. ಆದರೆ ಜರ್ಮನಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಹೌದು. ಪಶ್ಚಿಮ ಜರ್ಮನಿಯಲ್ಲಿ ಯುವತಿಯೊಬ್ಬಳು ತಾನು ಪ್ರೀತಿಸಿದವನು ತನ್ನನ್ನು ಬಳಸಿಕೊಂಡು ಕೈಕೊಡುವ ಭಯದಲ್ಲಿದ್ದ ಖತರ್ನಾಕ್ ಉಪಾಯವೊಂದನ್ನು ಹೂಡಿದ್ದಾಳೆ. ಬಾಯ್ ಫ್ರೆಂಡ್ ಜೊತೆ ದೈಹಿಕ ಸಂಪರ್ಕ ನಡೆಸುತ್ತಿದ್ದ ವೇಳೆ ಆತನಿಗೆ ಗೊತ್ತಾಗದ ರೀತಿಯಲ್ಲಿ ಕಾಂಡೋಮ್ ನಲ್ಲಿ ರಂಧ್ರ ಮಾಡಿ, ಇದೀಗ ಆಕೆ ಸಂಕಷ್ಟಕ್ಕೆ ಸಿಲುಕಿದ್ದಾಳೆ.

39 ವರ್ಷದಾಕೆಗೆ 42 ವರ್ಷದ ವ್ಯಕ್ತಿ ಆನ್ಲೈನ್ ಮೂಲಕ ಪರಿಚಯವಾಗಿದ್ದಾನೆ. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಜೊತೆಗೆ ವಾಸವಾಗಿದ್ದಾರೆ. ಈ ವೇಳೆ ದೈಹಿಕ ಸಂಪರ್ಕವೂ ನಡೆದಿದೆ. ಆತನನ್ನು ವಿಪರೀತ ಹಚ್ಚಿಕೊಂಡ ಯುವತಿ, ಮದುವೆ ಮಾಡಿಕೊಳ್ಳುವಂತೆ ತಿಳಿಸಿದ್ದಾಳೆ. ಆದರೆ ಇದಕ್ಕೆ ಆತ ಸೊಪ್ಪು ಹಾಕಲಿಲ್ಲ. ಇದರಿಂದ ರೋಸಿ ಹೋದ ಯುವತಿ ಈ ಉಪಾಯ ಮಾಡಿದ್ದಾಳೆ. 

ತಾನು ಗರ್ಭಿಣಿಯಾದರೆ ಆತ ತನನ್ನು ಮದುವೆಯಾಗುತ್ತಾನೆ ಎಮದು ಆಕೆ ಭಾವಿಸಿದ್ದಾಳೆ. ಹೀಗಾಗಿ ದೈಹಿಕ ಸಂಬಂಧದ ವೇಳೆ ಆತನಿಗೆ ತಿಳಿಯದಂತೆ ಕಾಂಡೋಮ್ಗೆ ರಂಧ್ರ ಮಾಡಿದ್ದಾಳೆ. ಸೆಕ್ಸ್ ಬಳಿಕ ಆತನಿಗೆ ಮೆಸೇಜ್ ಮಾಡಿ ನಾನು ಗರ್ಭಿಣಿಯಾಗಿದ್ದೇನೆಂದು ಅನಿಸುತ್ತದೆ ಎಂದು ಹೇಳಿದ್ದಾಳೆ. ಅಲ್ಲದೆ ತಾನು ಮಾಡಿರುವ  ಕೃತ್ಯವನ್ನು ಕೂಡ ಒಪ್ಪಿಕೊಂಡಿದ್ದಾಳೆ. 

ಇತ್ತ ಯುವತಿ ಮಾತು ಕೇಳಿದ ಯುವಕನಿಗೆ ದಿಕ್ಕೇ ತೋಚದಂತಾಗಿದೆ. ಕೂಡಲೇ ಠಾಣೆಗೆ ತೆರಳಿ ಯುವತಿ ವಿರುದ್ಧ ಕ್ರಿಮಿನಲ್ ದೂರು ದಾಖಲು ಮಾಡಿದ್ದಾನೆ. ಅಲ್ಲದೆ ದೈಹಿಕ ಸಂಬಂಧದ ವೇಳೆ ತನಗೆ ಗೊತ್ತಿಲ್ಲದ ರೀತಿಯಲ್ಲಿ ಕಾಂಡೋಮ್ಗೆ ರಂಧ್ರ ಮಾಡಿದ್ದಾಳೆ. ಇದೊಂದು ಕ್ರಿಮಿನಲ್ ಕೇಸ್ ಆಗಿದೆ ಎಂದು ಆತ ಕೋರ್ಟ್ ಮೊರೆ ಹೋಗಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ದಲಿತ ವಿರೋಧಿಯಲ್ಲ, ತಪ್ಪಾಗಿದ್ದರೆ ಕ್ಷಮಿಸಿ ಎಂದ ಜಿಟಿ ದೇವೇಗೌಡ

ಬಿಜೆಪಿ ಮತಕಳ್ಳತನದಿಂದ ಅಧಿಕಾರ ಉಳಿಸಿಕೊಂಡಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ

ಬೀದಿ ನಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪುನ ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರ

ಕಲಾಸಿಪಾಳ್ಯ: ಕೇಸರಿ ಶಾಲು ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ, ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ