Select Your Language

Notifications

webdunia
webdunia
webdunia
webdunia

ಮುಂದಿನ ಅಮೆರಿಕಾ ಅಧ್ಯಕ್ಷ ನಾನೇ ಎಂದ ಡೊನಾಲ್ಡ್ ಟ್ರಂಪ್

ಮುಂದಿನ ಅಮೆರಿಕಾ ಅಧ್ಯಕ್ಷ ನಾನೇ ಎಂದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ , ಸೋಮವಾರ, 17 ಆಗಸ್ಟ್ 2020 (15:39 IST)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಅವಧಿಗೂ ತಾವೇ ಅಧ್ಯಕ್ಷ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.

ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಭವಿಷ್ಯ ನುಡಿದಿದ್ದಾರೆ.

ಚುನಾವಣೆ ಫಲಿತಾಂಶ ತಿಳಿದುಕೊಳ್ಳಲು "ತಿಂಗಳುಗಳು" ಅಥವಾ "ವರ್ಷಗಳು" ತೆಗೆದುಕೊಳ್ಳಬಹುದು ಎಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಫಲಿತಾಂಶದ ದಿನ ಸಂಜೆ ವೇಳೆಗೆ 'ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದಿದ್ದಾರೆ, ಡೊನಾಲ್ಡ್ ಟ್ರಂಪ್ ನಿಮ್ಮ ಹೊಸ ಅಧ್ಯಕ್ಷರು' ಎಂದು ಘೋಷಣೆ ಮಾಡುತ್ತಾರೆ ಎಂದು ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿವಾದದ ಬಳಿಕ ಭಾರತ-ನೇಪಾಳ ನಡುವೆ ಇಂದು ಮಾತುಕತೆ