Select Your Language

Notifications

webdunia
webdunia
webdunia
webdunia

ಹಿಮದಲ್ಲಿ ಬಿದ್ದು ಸಾಯಲಿದ್ದ ಮಾಲೀಕನನ್ನು ರಕ್ಷಿಸಿದ ನಾಯಿ

ಹಿಮದಲ್ಲಿ ಬಿದ್ದು ಸಾಯಲಿದ್ದ ಮಾಲೀಕನನ್ನು ರಕ್ಷಿಸಿದ ನಾಯಿ
ಮಿಚಿಗನ್ , ಸೋಮವಾರ, 16 ಜನವರಿ 2017 (09:14 IST)
ನಾಯಿಯೊಂದು ಹಿಮ ಪ್ರದೇಶದಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ತನ್ನ ಮಾಲೀಕನ ಪ್ರಾಣ ಉಳಿಸಿದ ಹೃದಯ ಕಲಕುವ ಘಟನೆ ಅಮೇರಿಕಾದಲ್ಲಿ ನಡೆದಿದೆ. 
ಮಿಚಿಗನ್ ನಿವಾಸಿ 64 ವರ್ಷದ ಬಾಬ್  ಹೊಸ ವರ್ಷದ ಮುನ್ನಾದಿನ ಉರುವಲು ಸಂಗ್ರಹಿಸಲು ಹಿಮಪ್ರದೇಶದಲ್ಲಿ ಸಾಗುತ್ತಿದ್ದಾಗ ಕುತ್ತಿಗೆಯ ಭಾಗಕ್ಕೆ ಪಾರ್ಶ್ವವಾಯುಗೊಳಗಾಗಿ ಕುಸಿದು ಬಿದ್ದಿದ್ದಾರೆ. ಆ ಸಮಯದಲ್ಲಿ ಅವರ ಮನೆಯಲ್ಲಿ ಕೂಡ ಯಾರೂ ಇರಲಿಲ್ಲ. ಸುತ್ತಮುತ್ತಲೂ ಸಹ ಮನೆಗಳಿರಲಿಲ್ಲ.  ಏಳಲಾಗದೇ ಪರದಾಡುತ್ತಿದ್ದ ಅವರು ಕೂಗಿಕೊಂಡರೂ ಕಾಲು ಕೀಲೋಮೀಟರ್‌ಗಳಷ್ಟು ದೂರದ ಮನೆಗಳಿಗೆ ಕೇಳಿಸಲೇ ಇಲ್ಲ. ಆಗ ರಾತ್ರಿ 10.30 ಆಗಿದ್ದರಿಂದ ಜನಸಂಚಾರವೂ ಇರಲಿಲ್ಲ. 
 
ಇನ್ನೇನು ಚಳಿಯಿಂದಾಗಿ ಅನರು ಕೋಮಾವಸ್ಥೆಗೆ ಜಾರಬೇಕಿತ್ತು, ಸಾವು ಕೂಡ ಅವರ ಹತ್ತಿರದಲ್ಲಿತ್ತು. ಅಷ್ಟರಲ್ಲಿ ಅವರ ಪ್ರೀತಿಯ ಸಾಕುನಾಯಿ 5 ವರ್ಷದ ಗೋಲ್ಡನ್ ರಿಟ್ರೈವರ್ ಕೆಲ್ಸೀಯ್ ಓಡೋಡಿ ಬಂದಿದೆ. ತನ್ನ ಮಾಲೀಕನಿಗಾದ ಸ್ಥಿತಿ ಕಂಡು ಕಂಗಾಲಾದ ಅದು ಆತನ ದೇಹವೇರಿ ಕುಳಿತು ಮೈಶಾಖ ನೀಡಿ ಚಳಿಯಿಂದ ಕಾಪಾಡಲು ಪ್ರಯತ್ನಿಸಿದೆ. ಕೈ ಮತ್ತು ಮುಖವನ್ನು ನಿರಂತರವಾಗಿ ನೆಕ್ಕುತ್ತ ಅವರನ್ನು ಎಚ್ಚರವಾಗಿರಿಸಿದೆ. ಜತೆಗೆ ಜೋರಾಗಿ ಬೊಗಳುತ್ತ ಹತ್ತಿದವರನ್ನು ಸಹಾಯಕ್ಕಾಗಿ ಕರೆದಿದೆ. ಆದರೆ ಹೊಸವರ್ಷದ ಸಂಜೆಯವರೆಗೂ ಯಾರು ಕೂಡ ಅತ್ತ ಸುಳಿದಿಲ್ಲ. ಆದರೆ ನಾಯಿ ಬೊಗಳುವುದನ್ನು ಮುಂದುವರೆಸಿದ್ದು ಸಂಜೆ 6.30 ರ ಸುಮಾರಿಗೆ ಸ್ಥಳೀಯರೊಬ್ಬರು ಬಾಬ್ ಸಹಾಯಕ್ಕೆ ಬಂದಿದ್ದಾರೆ.
 
19 ಗಂಟೆಗಳ ಕಾಲ ಹಿಮದಲ್ಲಿ ಬಿದ್ದಿದ್ದ ಬಾಬ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 
ಬಾಬ್ ಕೋಮಾಗೆ ಜಾರುವವರಿದ್ದರು, ಪ್ರಾಣಾಪಾಯದ ಸಂಭವವೂ ಇತ್ತು. ನಾಯಿ ನೀಡಿದ ಶಾಖವೇ ಅವರನ್ನುಳಿಸಿದೆ ಎಂದು ವೈದ್ಯರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೋಗಿಯನ್ನೇ ಬಿಟ್ಟು ಬಂದ ನಾಂದೇಡ ಎಕ್ಸಪ್ರೆಸ್