ನಾಂದೇಡ್‌ನಿಂದ ಬೆಂಗಳೂರಿಗೆ ಹೊರಟಿದ್ದ ನಾಂದೇಡ ಎಕ್ಸಪ್ರೆಸ್ ಬೋಗಿಯನ್ನೇ ಬಿಟ್ಟು ಬಂದ ಪ್ರಸಂಗ ಬೆಳಕಿಗೆ ಬಂದಿದೆ.
ರೈಲು ಆಂಧ್ರದ ಕರ್ನೂಲ್ ಬಳಿಯ ಅದೋನಿಗೆ ಬರುತ್ತಿದ್ದಂತೆ ಪ್ರಯಾಣಿಕರು ತಾವು ಕಾದಿರಿಸಿದ್ದ ಸೀಟಿಗಾಗಿ ಹಡುಕಾಟ ನಡೆಸಿದ್ದಾರೆ. ಆಗ ಸೀಟಿರಲಿ, ಬೋಗಿಯೇ ಇಲ್ಲದಿರುವುದು ಬೆಳಕಿಗೆ ಬಂತು.
ಹೀಗಾಗಿ ಪ್ರಯಾಣಿಕರು ಟಿಸಿಗೆ ಈ ಕುರಿತು ವಿಚಾರಿಸಿದ್ದು, ಅವರು ಟಿಸಿ ಬಿಟ್ಟು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಟಿಸಿ ಮತ್ತು ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದು, ಪ್ರಯಾಣಿಕರು ಪ್ರತಿಭಟನೆಯನ್ನು ಕೂಡ ನಡೆಸಿದರು.
ಕೊನೆಗೆ ಬೇರೆ ಬೋಗಿಯಲ್ಲಿ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಿಕೊಡಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ