ಅತಿಯಾಗಿ ನಕ್ಕ ಮಹಿಳೆಗೆ ಆಗಿದ್ದೇನು ಗೊತ್ತಾ?

ಶುಕ್ರವಾರ, 13 ಸೆಪ್ಟಂಬರ್ 2019 (09:10 IST)
ಚೀನಾ : ನಮ್ಮ ವರ್ತನೆ ಅತಿರೇಕವಾದಾಗ ಸಮಸ್ಯೆಗಳು ಎದುರಾಗುತ್ತದೆ ಎಂಬುದಕ್ಕೆ ಚೀನಾದಲ್ಲಿ ಮಹಿಳೆಗೆ ಆದ  ಈ ಪರಿಸ್ಥಿತಿಯಿಂದ ತಿಳಿದುಕೊಳ್ಳಬಹುದು.
ಹೌದು. ನಗುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗುವಾಂಗ್‌ ಝೂ ಪ್ರಾಂತದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತನ ಸಂಗಡಿಗರೊಂದಿಗೆ ವಿಪರೀತವಾಗಿ ನಕ್ಕಿದ್ದಕ್ಕೆ ಅವರ ದವಡೆ ಮೂಳೆಯ ಸ್ಥಾನ ತಪ್ಪಿದೆ.
ಇದರಿಂದ ಆಕೆ ಬಾಯಿ ಮುಚ್ಚಲಾರದೆ ಒದ್ದಾಡಿದ್ದಾಳೆ. ಅದೃಷ್ಟವಶಾತ್ ಅದೇ ರೈಲಿನಲ್ಲಿ ವೈದ್ಯರೊಬ್ಬರಿದ್ದರಿಂದ ಅವರು ಆಕೆಯ ದವಡೆಯನ್ನು ಸ್ವಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬ್ಯಾಂಕುಗಳನ್ನು ವಿಲೀನಗೊಳಿಸುವಿಕೆಯನ್ನು ವಿರೋಧಿಸಿ 2 ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ