Select Your Language

Notifications

webdunia
webdunia
webdunia
webdunia

ಒಂಟೆ ಸವಾರಿಯ ವೇಳೆ ಬಿದ್ದು ಎಡವಟ್ಟು ಮಾಡಿಕೊಂಡ ಮಹಿಳೆ ಆಮೇಲೆ ಮಾಡಿದ್ದೇನು ಗೊತ್ತಾ?

ಒಂಟೆ ಸವಾರಿಯ ವೇಳೆ ಬಿದ್ದು ಎಡವಟ್ಟು ಮಾಡಿಕೊಂಡ ಮಹಿಳೆ ಆಮೇಲೆ ಮಾಡಿದ್ದೇನು ಗೊತ್ತಾ?
ಮೊರಾಕೊ , ಮಂಗಳವಾರ, 7 ಜನವರಿ 2020 (06:36 IST)
ಮೊರಾಕೊ: ಮೊರಾಕೋ ಪ್ರವಾಸದಲ್ಲಿರುವ ಮಹಿಳೆಯೊಬ್ಬಳು ಒಂಟೆ ಸವಾರಿಯ ವೇಳೆ  ಮಾಡಿಕೊಂಡ ಎಡವಟ್ಟಿಗೆ ಟ್ರಾವೆಲ್ ಏಜೆನ್ಸಿಯ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ.



ಮರುಭೂಮಿಯಲ್ಲಿರುವ ಒಂಟೆಗಳು ನೋಡಲು ಶಾಂತವಾಗಿ ಕಾಣಬಹುದು. ಆದರೆ ಕೆಲವೊಮ್ಮೆ ಅವು ವೇಗವಾಗಿ ಚಲಿಸುತ್ತವೆ. ಆದರೆ ಇದನ್ನು ತಿಳಿಯದ  24 ವರ್ಷದ ಬ್ರೆನ್ನೆ ಅಯಾಲಾ ಎಂಬ ಮಹಿಳೆ ಒಂಟೆ ಸವಾರಿ ಮಾಡಿದ್ದು, ಆ ವೇಳೆ ಒಂಟೆ ವೇಗವಾಗಿ ಓಡಿದ ಕಾರಣ ಆಕೆ ನೆಲದ ಮೇಲೆ ಬಿದ್ದಿದ್ದಾಳೆ.


ಇದರಿಂದ ಕೋಪಗೊಂಡ ಆಕೆ ಮಸ್ಸಾಚುಸೆಟ್ಸ್ ಮೂಲದ ಟಿಪ್ ಅಡ್ವೈಸರ್ ಜಾಲತಾಣ ಹಾಗೂ ಅದರ ಅಂಗ ಸಂಸ್ಥೆ ವಿಯೇಟರ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳು, ಗಂಡನನ್ನೇ ಮನೆಯಿಂದ ಹೊರದಬ್ಬಿದ ಹೆಂಡತಿ