ಈ ಬ್ರಾ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಿ!

ಗುರುವಾರ, 8 ನವೆಂಬರ್ 2018 (10:03 IST)
ವಾಷಿಂಗ್ ಟನ್ : ನ್ಯೂಯಾರ್ಕ್​ನಲ್ಲಿ ನವೆಂಬರ್​ 8ರಂದು ನಡೆಯಲಿರುವ ವಿಕ್ಟೋರಿಯಾ ಸೀಕ್ರೆಟ್​ ಫ್ಯಾಷನ್​ ಶೋನಲ್ಲಿ ಖ್ಯಾತ ಮಾಡೆಲ್​ ಎಲ್ಸಾ ಹೊಸ್ಕ್​ ಧರಿಸಲಿರುವ ಬ್ರಾ ಬೆಲೆ ಕೇಳಿದ್ರೆ  ಬೆಚ್ಚಿ ಬೀಳ್ತೀರಾ.


ಹೌದು. ಸಾಮಾನ್ಯವಾಗಿ ಮಹಿಳೆಯರು ಧರಿಸುವ ಬ್ರಾ ಬೆಲೆ 200, 300 ಹೆಚ್ಚೆಂದರೆ 1000 ಇರುತ್ತದೆ. ಆದರೆ ಫ್ಯಾಷನ್​ ಶೋನಲ್ಲಿ ಖ್ಯಾತ ಮಾಡೆಲ್​ ಎಲ್ಸಾ ಹೊಸ್ಕ್​ ಧರಿಸಲಿರುವ ಬ್ರಾ ಬೆಲೆ 7.30 ಕೋಟಿ ರೂಪಾಯಿಯಂತೆ.


ಈ ಬ್ರಾವನ್ನು ಸಂಪೂರ್ಣವಾಗಿ ಆಫ್ರಿಕಾದ ಆಯ್ದ ವಿಶೇಷ ವಜ್ರಗಳಿಂದ ತಯಾರಿಸಲಾಗಿದ್ದು, ಇದನ್ನು ತಯಾರಿಸಲು 930 ಗಂಟೆಗಳು ಸಮಯ ಹಿಡಿದಿದೆಯಂತೆ. ಹಾಗೇ ಇದನ್ನು ಧರಿಸಲಿರುವ ಮಾಡೆಲ್ ಎಲ್ಸಾ ಅವರ ಜೊತೆ ನಾಲ್ವರು ಭದ್ರತಾ ಸಿಬ್ಬಂದಿಗಳು ಇರಲಿದ್ದು, ಎಲ್ಲಾದರೂ ವಜ್ರಗಳು ಬೀಳುತ್ತವಾ ನೋಡಿಕೊಳ್ಳುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜನಾರ್ಧನ ರೆಡ್ಡಿಗಾಗಿ ಮುಂದುವರಿದ ಸಿಸಿಬಿ ಪೊಲೀಸರ ಶೋಧ