Select Your Language

Notifications

webdunia
webdunia
webdunia
webdunia

ಪ್ರಕೃತಿಯ ಸೂಚನೆಯ ಮೇರೆಗೆ ಮೀನುಗಳು ತಮ್ಮ ಲಿಂಗನ್ನು ಹೇಗೆ ಬದಲಾಯಿಸುತ್ತವೆ ಗೊತ್ತಾ?

ಪ್ರಕೃತಿಯ ಸೂಚನೆಯ ಮೇರೆಗೆ ಮೀನುಗಳು ತಮ್ಮ ಲಿಂಗನ್ನು ಹೇಗೆ ಬದಲಾಯಿಸುತ್ತವೆ ಗೊತ್ತಾ?
ಮೆಲ್ಬೋರ್ನ್ , ಸೋಮವಾರ, 15 ಜುಲೈ 2019 (09:20 IST)
ಮೆಲ್ಬೋರ್ನ್ : ವಿಜ್ಞಾನಿಗಳು ಮೊದಲ ಬಾರಿಗೆ 500 ಪ್ರಭೇದದ ಮೀನುಗಳು, ಅದರಲ್ಲಿ ಪ್ರಸಿದ್ಧ ಕ್ಲೌನ್ ಫಿಶ್ ಸೇರಿದಂತೆ ಪ್ರೌಢಾವಸ್ಥೆಯಲ್ಲಿ ಪ್ರಕೃತಿಯ ಸೂಚನೆಯ ಮೇರೆಗೆ ತಮ್ಮ ಲಿಂಗನ್ನು ಹೇಗೆ ಬದಲಾಯಿಸುತ್ತದೆ ಎಂಬ ರಹಸ್ಯವನ್ನು ಕಂಡುಹಿಡಿದಿದ್ದಾರೆ.



ಹೆಚ್ಚಿನ ನೀಲಿ ತಲೆ ಹೊದಿಕೆ ಇರುವ ಮೀನುಗಳು ಹೆಣ್ಣಾಗಿ ಜೀವನ ಪ್ರಾರಂಭಿಸುತ್ತವೆ. ಆದರೆ ಸ್ವಲ್ಪ ಸಮಯದ ನಂತರ ಪುರುಷನಾಗಲು ಲೈಂಗಿಕತೆಯನ್ನು ಬದಲಾಯಿಸುತ್ತದೆ. ಈ ಪ್ರಕ್ರಿಯೆಯು ಮುಗಿಸಲು ಅದು  10-21 ದಿನಗಳನ್ನು ತೆಗೆದುಕೊಳ್ಳುತ್ತದೆ. ಗುಂಪಿನಲ್ಲಿ ಪ್ರಬಲ ಪುರುಷನನ್ನು ಕಳೆದುಕೊಂಡಾಗ ಅದರಲ್ಲಿ ದೊಡ್ಡದಾದ ಹೆಣ್ಣು ಮೀನು ಫಲವತ್ತಾದ ಪುರುಷನಾಗಿ ರೂಪಾಂತರಗೊಳ್ಳುತ್ತದೆ. ಈ ರೂಪಾಂತರವನ್ನು ಅವು ನಿಮಿಷದಲ್ಲಿ ಪ್ರಾರಂಭಿಸುತ್ತದೆ.


ಮೊದಲು ಬಣ್ಣವನ್ನು ಬದಲಾಯಿಸುತ್ತವೆ. ನಂತರ ಪುರುಷ ತರಹದ ನಡವಳಿಕೆಯನ್ನ ಪ್ರದರ್ಶಿಸುತ್ತವೆ. ಅವುಗಳ ಅಂಡಾಶಯ ಹೋಗಿ ಆ ಸ್ಥಳದಲ್ಲಿ ಕ್ರಿಯಾತ್ಮಕ ವೃಷಣಗಳು ಬೆಳೆಯುತ್ತವೆ ಎಂದು ನ್ಯೂಜಿಲೆಂಡ್ ನ ಒಟಾಗೊ ವಿಶ್ವವಿದ್ಯಾಲಯದ ಎರಿಕಾ ಟಾಡ್ ಹೇಳಿದ್ದಾರೆ.


 

ಅಧ್ಯಯನದ ಪ್ರಕಾರ ಈ ವಿದ್ಯಮಾನವು ಕ್ಲೌನ್ ಫಿಶ್ ಮತ್ತು ಕೊಬುಡೈ ಸೇರಿದಂತೆ ಸುಮಾರು 500 ಜಾತಿಯ ಮೀನುಗಳಲ್ಲಿ ಜೀವನ ಚಕ್ರದ ನೈಸರ್ಗಿಕ ಭಾಗವಾಗಿ ಕಂಡುಬರುತ್ತದೆ ಎಂದು ತಿಳಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ಕಂಡಿಷನ್ ಮೇರೆಗೆ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ ಎಂಟಿಬಿ ನಾಗರಾಜ್