Select Your Language

Notifications

webdunia
webdunia
webdunia
webdunia

ಡೋಕ್ಲಾಂ ನಮ್ಮದು, ಭಾರತಕ್ಕೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಮತ್ತೆ ಕಾಲ್ಕೆರೆದ ಚೀನಾ

ಡೋಕ್ಲಾಂ ನಮ್ಮದು, ಭಾರತಕ್ಕೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಮತ್ತೆ ಕಾಲ್ಕೆರೆದ ಚೀನಾ
ನವದೆಹಲಿ , ಶನಿವಾರ, 20 ಜನವರಿ 2018 (07:59 IST)
ನವದೆಹಲಿ: ಡೋಕ್ಲಾಂ ಗಡಿ ವಿವಾದ ಮತ್ತೆ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಡೋಕ್ಲಾಂ ಗಡಿಯಲ್ಲಿ ಚೀನಾ ಮಿಲಿಟರಿ ಚಟುವಟಿಕೆ ನಡೆಸುತ್ತಿದೆ ಎಂದು ಇತ್ತೀಚೆಗೆ ಸ್ಯಾಟ್ ಲೈಟ್ ಫೋಟೋಗಳು ಬಿಡುಗಡೆಯಾದ ಬೆನ್ನಲ್ಲೇ ಭಾರತವನ್ನು ಕೆಣಕುವಂತಹ ಹೇಳಿಕೆಯನ್ನು ಚೀನಾ ನೀಡಿದೆ.
 

ಡೋಕ್ಲಾಂ ನಮ್ಮದು. ಆ ಗಡಿ ಭಾಗದಲ್ಲಿ ಯಾವುದೇ ಕಟ್ಟಡ, ಕಾಮಗಾರಿ ನಡೆಸುವ ಹಕ್ಕು ನಮಗಿದೆ. ಈ ವಿಚಾರದಲ್ಲಿ ಭಾರತ ತಗಾದೆ ತೆಗೆಯುವಂತಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟವಾಗಿ ಹೇಳಿದೆ.

ಇಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿ ನ್ಯಾಯಸಮ್ಮತವಾಗಿದೆ ಎಂದು ಅದು ಸಮರ್ಥಿಸಿಕೊಂಡಿದೆ. ಡೋಕ್ಲಾಂ ವಿವಾದಿತ ಗಡಿ ಭಾಗದಲ್ಲಿ ಈಗಾಗಲೇ ಚೀನಾ ಸೇನಾ ಬಂಕರ್ ಗಳು, ಹೆಲಿಪ್ಯಾಡ್ ಗಳನ್ನು ನಿರ್ಮಿಸಿದೆ ಎಂದು ವರದಿಗಳು ಬಂದ ಬೆನ್ನಲ್ಲೇ ಚೀನಾದಿಂದ ಈ ಹೇಳಿಕೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಾಲೂ ಪ್ರಸಾದ್ ಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಶಿವಪಾಲ್ ಸಿಂಗ್ ಗನ್ ಲೈಸೆನ್ಸ್ ಕೋರಿದ್ದಾದರೂ ಯಾಕೆ…?