Select Your Language

Notifications

webdunia
webdunia
webdunia
webdunia

ಚೀನಾ, ಅಮೆರಿಕಾ ಅಧ್ಯಕ್ಷರನ್ನು ಮೀರಿಸಿದ ಪ್ರಧಾನಿ ಮೋದಿ ಹೊಸ ದಾಖಲೆ!

ಚೀನಾ, ಅಮೆರಿಕಾ ಅಧ್ಯಕ್ಷರನ್ನು ಮೀರಿಸಿದ ಪ್ರಧಾನಿ ಮೋದಿ ಹೊಸ ದಾಖಲೆ!
ನವದೆಹಲಿ , ಶುಕ್ರವಾರ, 12 ಜನವರಿ 2018 (08:36 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹೊಸದೊಂದು ದಾಖಲೆ ಮಾಡಿದ್ದಾರೆ. ಪ್ರಪಂಚದ ಅತೀ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಚೀನಾ, ಅಮೆರಿಕಾ ಮತ್ತು ರಷ್ಯಾ ಅಧ್ಯಕ್ಷರನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದ್ದಾರೆ.
 

ಗಲ್ಲಪ್ ಇಂಟರ್ ನ್ಯಾಷನಲ್ ನ ‘ಒಪೀನಿಯನ್ ಆಫ್ ವರ್ಲ್ಡ್ ಲೀಡರ್ಸ್’  ವಾರ್ಷಿಕ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ವಿಶ್ವ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ಜಗತ್ತಿನ ಪ್ರಬಲ ರಾಷ್ಟ್ರಗಳಾದ ಅಮೆರಿಕಾ, ಚೀನಾ, ರಷ್ಯಾ ಅಧ್ಯಕ್ಷರನ್ನೂ ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ.

ಪ್ರಧಾನಿ ಮೋದಿಗಿಂತ ಮೊದಲೆರಡು ಸ್ಥಾನ ಜರ್ಮನಿ ಚಾನ್ಸಲರ್ ಆಂಜೆಲಾ ಮೆರ್ಕೆಲ್ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಲ್ ಮ್ಯಾಕ್ರನ್ ಇದ್ದಾರೆ. ಪ್ರಧಾನಿ ಮೋದಿಗಿಂತ ನಂತರದ ಅಂದರೆ ನಾಲ್ಕನೇ ಸ್ಥಾನ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರದ್ದಾಗಿದೆ.

ಪಟ್ಟಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಆರನೇ ಸ್ಥಾನವಾದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ 10 ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕರವೇ ಲಂಚ ತೆಗೆದುಕೊಂಡಿತೇ?!