Webdunia - Bharat's app for daily news and videos

Install App

ಮತ್ತೆ ಕೋವಿಡ್ ಆತಂಕ; ಹರಡಿದೆ ಹೊಸ ತಳಿ ಎರಿಸ್

Webdunia
ಸೋಮವಾರ, 7 ಆಗಸ್ಟ್ 2023 (13:53 IST)
ಲಂಡನ್ : ಕೋವಿಡ್-19  ಇನ್ನೂ ಮುಗಿದಂತೆ ಕಾಣುತ್ತಿಲ್ಲ. ವೇಗವಾಗಿ ಹರಡುತ್ತಿರುವ ಒಮಿಕ್ರಾನ್ನಿಂದ ಬಂದಿರುವ ಹೊಸ ರೂಪಾಂತರ, EG.51 ಈಗ ಬ್ರಿಟನ್ ನಲ್ಲಿ ಕಾಣಿಸಿಕೊಂಡಿದೆ.
 
ಎರಿಸ್ ಎಂದು ಕರೆಯಲ್ಪಡುವ ಈ ತಳಿ ಕಳೆದ ತಿಂಗಳು ಯುಕೆಯಲ್ಲಿ ಮೊದಲ ಬಾರಿ ಪತ್ತೆಯಾಗಿದ್ದು ಇದು ದೇಶದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ಇಂಗ್ಲೆಂಡ್ನ ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಏಳು ಹೊಸ ಕೋವಿಡ್ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಎರಿಸ್ ಎಂಬ EG.51 ಪತ್ತೆಯಾಗಿದೆ  ಎಂದು ವರದಿ ಹೇಳಿದೆ.

ಇತ್ತೀಚಿನ ದತ್ತಾಂಶಗಳ ಪ್ರಕಾರ ಆ ತಳಿ ಈಗ ಶೇ 14.6 ಪ್ರಕರಣಗಳಿಗೆ ಕಾರಣವಾಗಿದೆ ಎಂದು ಸೂಚಿಸುತ್ತದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಹೇಳಿರುವುದಾಗಿ ಸ್ಕೈ ನ್ಯೂಸ್ ವರದಿ ಮಾಡಿದೆ.

ನಮ್ಮ ಹಿಂದಿನ ವರದಿಗೆ ಹೋಲಿಸಿದರೆ ಈ ವಾರ ಕೋವಿಡ್- 19 ಪ್ರಕರಣಗಳ ದರಗಳು ಹೆಚ್ಚಾಗುತ್ತಲೇ ಇವೆ. ರೆಸ್ಪಿರೇಟರಿ ಡೇಟಾಮಾರ್ಟ್ ಸಿಸ್ಟಮ್ ಮೂಲಕ ವರದಿ ಮಾಡಲಾದ 4,396 ಉಸಿರಾಟದ ಮಾದರಿಗಳಲ್ಲಿ ಶೇ 5.4 ಅನ್ನು ಕೋವಿಡ್ ಎಂದು ಗುರುತಿಸಲಾಗಿದೆ. ಈ ಹಿಂದೆ ಇದು 4,403 ರಲ್ಲಿ ಶೇ 3.7 ಆಗಿತ್ತು ಎಂದು ಯುಕೆಎಚ್ಎಸ್ಎ ವರದಿಯಲ್ಲಿ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments