Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ

ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ
ಬೀಜಿಂಗ್ , ಶನಿವಾರ, 23 ಅಕ್ಟೋಬರ್ 2021 (12:09 IST)
ಬೀಜಿಂಗ್ : ಚೀನಾಗೆ ಬರುವ ಪ್ರವಾಸಿಗರಿಂದ ಚೀನಾದಲ್ಲಿ ಇದ್ದಕ್ಕಿದ್ದಂತೆ ಕೊವಿಡ್ ಪ್ರಕರಣಗಳು ಹೆಚ್ಚಾಗಿವೆ.
ಈ ಹಿನ್ನೆಲೆಯಲ್ಲಿ ಚೀನಾದ ಅಧಿಕಾರಿಗಳು ಬೇರೆ ದೇಶಗಳಿಗೆ ಚೀನಾದಿಂದ ಹೋಗುವ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಚೀನಾದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು, ಕೊರೊನಾ ಸೋಂಕು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಶ್ವದಾದ್ಯಂತ ಕೊರೊನಾ ಲಸಿಕೆಗಳನ್ನು ನೀಡುತ್ತಿರುವುದರಿಂದ ಕೊವಿಡ್ ಕೇಸುಗಳು ಕಡಿಮೆಯಾಗುತ್ತಿವೆ. ಆದರೆ, ಚೀನಾದಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಪ್ರಪಂಚದಲ್ಲಿ ಕೊರೊನಾ ಲಾಕ್​ಡೌನ್ ನಿಯಮಗಳು ಸಡಿಲವಾಗುತ್ತಿದ್ದರೂ ಚೀನಾದಲ್ಲಿ ಮಾತ್ರ ಇನ್ನೂ ಕೊರೊನಾ ಕೇಸುಗಳು ಕಡಿಮೆಯಾಗಿಲ್ಲ. ಚೀನಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಲು ಅಲ್ಲಿಗೆ ಬಂದಿದ್ದ ಪ್ರವಾಸಿಗರ ಗುಂಪಿನಲ್ಲಿದ್ದ ವೃದ್ಧ ದಂಪತಿ ಕಾರಣ ಎಂದು ಹೇಳಲಾಗುತ್ತಿದೆ. ಅವರು ಸಾಕಷ್ಟು ಕಡೆ ಓಡಾಡಿದ್ದು, ಅವರಿಂದಲೇ ಕೊರೊನಾ ಕೇಸುಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿಗೂಢ ಕಾಯಿಲೆಯಿಂದ 165 ಮಕ್ಕಳು ಸಾವು!