Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕು ದಿಢೀರ್ ಕುಸಿತ

ಕೊರೊನಾ ಸೋಂಕು ದಿಢೀರ್ ಕುಸಿತ
ಟೋಕಿಯೊ , ಸೋಮವಾರ, 18 ಅಕ್ಟೋಬರ್ 2021 (14:04 IST)
ಟೋಕಿಯೊ : ಜಪಾನ್ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಸುಮಾರು 6 ಸಾವಿರದಷ್ಟಿದ್ದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದ್ದು, ಲಸಿಕೆ ಅಭಿಯಾನವೇ ಇದಕ್ಕೆಲ್ಲ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಜನರು ಎರಡು ಡೋಸ್ನ ಲಸಿಕೆ ಪಡೆದಿದ್ದಾರೆ.
'ಸೋಂಕು ಕುಸಿತದ ಹಿಂದೆ ಲಸಿಕೆಯ ಪರಿಣಾಮವಿದೆ. ಇದು ಅತ್ಯಂತ ದೊಡ್ಡಮಟ್ಟದಲ್ಲಿ ಪಾತ್ರ ವಹಿಸಿದೆ. ಅಲ್ಲದೇ ಜನರಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು' ಎಂದು ಟೋಕಿಯೊದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ನಿರ್ದೇಶಕ ನೊರಿಯೊ ಓಮಗರಿ ಹೇಳಿದ್ದಾರೆ.
ಲಾಕ್ಡೌನ್ ಹೊರತಾಗಿ ಕ್ಷಿಪ್ರ ಲಸಿಕಾ ಅಭಿಯಾನ, ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಕಾಣುತ್ತಿದ್ದಂತೆಯೇ ರಾತ್ರಿ ಕರ್ಫ್ಯೂ, ಮಾಸ್ಕ್ ಧರಿಸುವುದು ಹಾಗೂ ಆಗಸ್ಟ್ನಲ್ಲಿ ಕೆಟ್ಟ ಹವಾಮಾನದ ಕಾರಣ ಜನರು ಮನೆಯಿಂದ ಹೊರಗೆ ಹೋಗದಿರುವುದು ಕೂಡಾ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಮದ್ದೂರು ಹೆದ್ದಾರಿ ಅವ್ಯವಸ್ಥೆ (ನಿತ್ಯ ನರಕ )