Select Your Language

Notifications

webdunia
webdunia
webdunia
webdunia

ನಾಯಿಯ ಮಲವನ್ನು ಎತ್ತಲು ಬರುತ್ತಿದೆ ಹೊಸ ಸಾಧನ

ನಾಯಿಯ ಮಲವನ್ನು ಎತ್ತಲು ಬರುತ್ತಿದೆ ಹೊಸ ಸಾಧನ
ನೆದರ್ ಲ್ಯಾಂಡ್ , ಶುಕ್ರವಾರ, 13 ಡಿಸೆಂಬರ್ 2019 (06:23 IST)
ನೆದರ್ ಲ್ಯಾಂಡ್ : ನಿಮ್ಮ ಮನೆಯ ಸುತ್ತಮುತ್ತ ಅಥವಾ ರಸ್ತೆಗಳಲ್ಲಿ ಬೆಳಿಗ್ಗೆ ನಾಯಿಯ ಮಲವನ್ನು ನೋಡಿದರೆ ತುಂಬಾ ಅಸಹ್ಯವಾಗುತ್ತದೆ. ನಿಮ್ಮ ನಾಯಿಯನ್ನು ಸಾಕುತ್ತಿದ್ದರೆ ಪ್ರತಿದಿನ ಈ ಸಮಸ್ಯೆಯನ್ನು ಎದುರಿಸಬೇಕು. ಅದಕ್ಕಾಗಿ ಈಗ ಹೊಸ ಸಾಧನವೊಂದನ್ನು ಕಂಡುಹಿಡಿಯಲಾಗಿದೆ.


ಹೌದು. ನಾಯಿಗಳ ಮಲವನ್ನು ಪತ್ತೆ ಮಾಡಿ ಅದನ್ನು ಮಾನವರ ಹಸ್ತಕ್ಷೇಪವಿಲ್ಲದೇ ಸ್ವಚ್ಚ ಮಾಡುವಂತಹ ಸಾಧನವಾದ ರೋಬೋಟ್ ವೊಂದನ್ನು ಅನ್ವೇಷಿಸಲಾಗಿದೆ. ಈ ಯಂತ್ರಕ್ಕೆ ‘ಬೀಟ್ಲ್’ ಎಂದು ಕರೆಯಲಾಗಿದೆ. ಇದು ನಾಯಿ ಮಲವನ್ನು ಕಂಡುಹಿಡಿಯಲು ಸಂವೇದಕಗಳು ಮತ್ತು ಕ್ಯಾಮರಾಗಳನ್ನು ಹೊಂದಿದೆ.

 

ಆದರೆ ಈ ಸಾಧನವು ಪರೀಕ್ಷಾ ಹಂತದಲ್ಲಿದ್ದು, ಇದು ಮಾರುಕಟ್ಟೆಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ನೆದರ್ ಲ್ಯಾಂಡ್ ನಲ್ಲಿ 2017ರಲ್ಲೇ ಈ ಸಾಧನವನ್ನು ಬಳಸಲಾಗುತ್ತಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ ಸೋಲಿಗೆ ಸಿದ್ದರಾಮಯ್ಯ ಕಾರಣ ಅಂದ್ರಾ ಡಾ.ಜಿ.ಪರಮೇಶ್ವರ್