Select Your Language

Notifications

webdunia
webdunia
webdunia
webdunia

ಹಳಿಗಳಿಲ್ಲದೆ ಓಡಾಡುವ ರೈಲುಗಳನ್ನು ಕಂಡುಹಿಡಿದ ಚೀನಾ

ಹಳಿಗಳಿಲ್ಲದೆ ಓಡಾಡುವ ರೈಲುಗಳನ್ನು ಕಂಡುಹಿಡಿದ ಚೀನಾ
ಚೀನಾ , ಮಂಗಳವಾರ, 20 ಆಗಸ್ಟ್ 2019 (09:04 IST)
ಚೀನಾ : ಸಾಮಾನ್ಯವಾಗಿ ರೈಲುಗಳು ಹಳಿಗಳ ಮೇಲೆ ಓಡಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಇನ್ನುಮುಂದೆ ಹಳಿಗಳಿಲ್ಲದೆ ಓಡಾಡುವ ರೈಲುಗಳನ್ನು ನೋಡಬಹುದು.



ಹೌದು. ಚೀನಾದ ವಿಜ್ಞಾನಿಗಳು ಹೊಸ ಆವಿಷ್ಕಾರವನ್ನು ಮಾಡಿದ್ದು, ಹಳಿಗಳಿಲ್ಲದೆ ಚಲಿಸಬಹುದಾದ ರೈಲೊಂದನ್ನು ಕಂಡು ಹಿಡಿದಿದ್ದಾರೆ. ಈ ರೈಲು ಕಂಬಿಗಳ ಸಹಾಯವಿಲ್ಲದೆ ರೋಡ್​ ಮೇಲೆ ಓಡಾಡುವಂತೆ ಸಿದ್ಧಪಡಿಸಿದ್ದಾರೆ.


ಈ ರೈಲು 500 ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. 2017ರಲ್ಲಿ ಈ ರೈಲಿನ ಪ್ರಾಯೋಗಿಕ ಪರೀಕ್ಷೆ ನಡೆಸಿದ ವಿಜ್ಞಾನಿಗಳು  ಇನ್ನಷ್ಟು ವಿಶೇಷತೆಗಳನ್ನು ಇದಕ್ಕೆ ಅಳವಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈ ನೂತನ ಟೈನ್​ ಅನ್ನು ಪರೀಕ್ಷೆಗೆ ಒಳಪಡಿಸಲು ಚೀನಾ ಮಿನಿ ಸಿಟಿಯೊಂದನ್ನು ನಿರ್ಮಾಣ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ಆಹಾರ ಸೇವಾ ಸಂಸ್ಥೆಗಳ ವಿರುದ್ಧ ಸಿಡಿದೆದ್ದ ಹೊಟೇಲ್ ಮಾಲೀಕರು