ಲಂಡನ್ : ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಾಕ್ ಅವರ ಕುಟುಂಬವು ಈ ಮೊದಲಿನ ತಮ್ಮ ಸಣ್ಣ ಫ್ಲಾಟ್ಗೆ ಮರಳಲಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಸುನಾಕ್ ಅವರ ಕುಟುಂಬವು 10 ಡೌನಿಂಗ್ ಸ್ಟ್ರೀಟ್ ನಿವಾಸಕ್ಕೆ ಬದಲಾಗಿ ತಮ್ಮ ಸಣ್ಣ ಫ್ಲಾಟ್ಗೆ ತೆರಳಿದ್ದಾರೆ. ಅಲ್ಲಿ ಅವರು ಸಂತೋಷವಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
10 ಡೌನಿಂಗ್ ಸ್ಟ್ರೀಟ್, 1735 ರಿಂದ ಬ್ರಿಟಿಷ್ ಪ್ರಧಾನ ಮಂತ್ರಿಗಳ ನಿವಾಸವಾಗಿದೆ. ಇದು ಮೂರು ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಧಾನ ಮಂತ್ರಿಯ ಅಧಿಕೃತ ನಿವಾಸ, ಅವರ ಕಚೇರಿ ಮತ್ತು ಪ್ರಧಾನ ಮಂತ್ರಿ, ವಿಶ್ವ ನಾಯಕರು ಹಾಗೂ ರಾಜಮನೆತನದ ಅತಿಥಿಗಳನ್ನು ಸತ್ಕಾರ ಮಾಡುವ ವ್ಯವಸ್ಥೆ ಇಲ್ಲಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!