Select Your Language

Notifications

webdunia
webdunia
webdunia
webdunia

ಐಫೆಲ್ ಟವರ್‌ಗೆ ಬಾಂಬ್ ಬೆದರಿಕೆ!

ಐಫೆಲ್ ಟವರ್‌ಗೆ ಬಾಂಬ್ ಬೆದರಿಕೆ!
ಪ್ಯಾರಿಸ್ , ಸೋಮವಾರ, 14 ಆಗಸ್ಟ್ 2023 (14:42 IST)
ಪ್ಯಾರಿಸ್ : ವಿಶ್ವದಲ್ಲೇ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳ ಪೈಕಿ ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ ಕೂಡ ಒಂದು. ವಿಶ್ವವಿಖ್ಯಾತ ಐಫೆಲ್ ಟವರ್ಗೂ ಕಂಟಕ ಎದುರಾಗಿದೆ.
 
ಹೌದು, ಪ್ಯಾರಿಸ್ನ ಐಫೆಲ್ ಟವರ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಐಫೆಲ್ ಟವರ್ ವೀಕ್ಷಣೆಗೆ ಬಂದಿದ್ದ ಪ್ರವಾಸಿರನ್ನು ಸ್ಥಳಾಂತರ ಮಾಡಲಾಗಿದೆ. ಐಫೆಲ್ ಟವರ್ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಒಂದು ವರ್ಷದಲ್ಲೇ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಿಶ್ವವಿಖ್ಯಾತ ಐಫೆಲ್ ಟವರ್ ವೀಕ್ಷಣೆ ಮಾಡಿದ್ದರು. ಈಗ ಅಲ್ಲಿ ಭದ್ರತಾ ಎಚ್ಚರಿಕೆ ವಹಿಸಲಾಗಿದೆ. ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವಥ್ ನಾರಾಯಣ ಅಲ್ಲ, ನವರಂಗಿ ನಾರಾಯಣ : ಶಿವಕುಮಾರ್ ಕಿಡಿ