Select Your Language

Notifications

webdunia
webdunia
webdunia
webdunia

ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು
ಮೊಗಡಿಶು , ಭಾನುವಾರ, 11 ಜೂನ್ 2023 (10:55 IST)
ಮೊಗಡಿಶು : ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾದ ಸೊಮಾಲಿಯಾದಲ್ಲಿ ಸ್ಫೋಟ ಸಂಭವಿಸಿದ್ದು, 25 ಮಕ್ಕಳು ಸೇರಿದಂತೆ 27 ಮಂದಿ ಸಾವಿಗೀಡಾಗಿದ್ದಾರೆ.
 
ಪೂರ್ವ ಲೋವರ್ ಶಾಬೆಲ್ಲೆಯ ಜನಾಲೆ ಪ್ರದೇಶದ ಮುರಾಲೆ ಗ್ರಾಮದ ಫುಟ್ಬಾಲ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ. ಹಳೆಯ ಬಾಂಬ್ನ ಅವಶೇಷಗಳು ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಸ್ಫೋಟದಲ್ಲಿ 53 ಮಕ್ಕಳು ಗಾಯಗೊಂಡಿದ್ದಾರೆ. 

ಮೃತರ ಪೈಕಿ 22 ಮಕ್ಕಳ ಶವಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಾಗಲೇ ಅವರೂ ಕೊನೆಯುಸಿರೆಳೆದಿದ್ದರು. ಮೊಗಾದಿಶುಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮತ್ತೊಂದು ಮಗು ಸಾವಿಗೀಡಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ : ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ