Select Your Language

Notifications

webdunia
webdunia
webdunia
webdunia

ಬರ್ಮುಡಾ ಟ್ರಯಾಂಗಲ್: ಚಿದಂಬರ ರಹಸ್ಯ ಬಯಲು?

ಬರ್ಮುಡಾ ಟ್ರಯಾಂಗಲ್: ಚಿದಂಬರ ರಹಸ್ಯ ಬಯಲು?
ನ್ಯೂಯಾರ್ಕ , ಸೋಮವಾರ, 24 ಅಕ್ಟೋಬರ್ 2016 (09:24 IST)
ನ್ಯೂಯಾರ್ಕ: ಶತಮಾನಗಳಿಂದ ವಿಜ್ಞಾನಿಗಳ ನಿದ್ದೆಗೆಡಿಸಿದ್ದ, ನೂರಾರು ನೌಕೆಗಳನ್ನು ಹಾಗೂ ವಿಮಾನಗಳನ್ನು ಆಪೋಶನ ಪಡೆದುಕೊಂಡಿದ್ದ ಅತ್ಯಂತ ಭಯಾನಕ ಬರ್ಮುಡಾ ಟ್ರೈಯಾಂಗಲ್ನ ಚಿದಂಬರ ರಹಸ್ಯ ಭೇದಿಸುವ ಅನ್ವೇಷಣೆಯೊಂದು ನಡೆಯುತ್ತಿದೆ.


 
ಮಿಯಾಮಿ, ಪ್ಯುಟೋರಿಕೊ ಮತ್ತು ಬರ್ಮುಡಾ ದ್ವೀಪದ ಮಧ್ಯದಲ್ಲಿ ತ್ರಿಕೋನಾಕೃತಿಯಲ್ಲಿರುವ ಬರ್ಮುಡಾ ಟ್ರಯಾಂಗಲ್ ನ ರಹಸ್ಯ ಶತಶತಮಾನಗಳಿಂದಲೂ ಇಡೀ ವಿಶ್ವಕ್ಕೆ ಸವಾಲಾಗಿತ್ತು. ಆದರೀಗ ಅದನ್ನು ಅನ್ವೇಷಿಸಿರುವ ವರದಿಯೊಂದನ್ನು ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ಬಿಕಡುಗಡೆ ಮಾಡಿದ್ದು, ಅದು ಒಂದಿಷ್ಟು ಕುತೂಹಲಕಾರಿಯಾಗಿದೆ. ಬರ್ಮುಡಾ ತ್ರಿಕೋನದ ಮೇಲೆ ಅಪರಿಚಿತ ಕಾರ್ಮೋಡಗಳು ಆವರಿಸಿದ್ದು, ಅದರಿಂದಲೇ ಸಾಕಷ್ಟು ನೌಕೆಗಳು ಹಾಗೂ ವಿಮಾನಗಳು ಕಣ್ಮರೆಯಾಗುತ್ತವೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಅದೊಂದು ಮೃತ್ಯಕೂಪವಾಗಿ ವಿಜ್ಞಾನಿಗಳಿಗೇ ಸವಾಲೆಸಿದಿತ್ತು. ಆದರೀಗ ಅನ್ವೇಷಣೆಯ ಮೊದಲ ಹಂತವಾಗಿ ಅಪರಿಚಿತ ಕಾರ್ಮೋಡ ಪತ್ತೆಯಾಗಿದ್ದು, ವಿಜ್ಞಾನಿಗಳಲ್ಲಿ ಹೊಸ ಭರವಸೆ ಹುಟ್ಟಿದೆ. ಬೃಹತ್ ಹಡಗುಗಳು ಮತ್ತು ವಿಮಾನಗಳನ್ನು ಸಮುದ್ರಾದಳಕ್ಕೆ ಸೆಳೆದೊಯ್ಯುವ ಅಗಾಧ ಗುರುತ್ವಾಕರ್ಷಣೆಯ ಶಕ್ತಿ ಈ ಕಾರ್ಮೋಡಗಳು ಹೊಂದಿವೆ ಎಂಬುದು ಸದ್ಯದ ವಾದವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
 
ಭೂಗರ್ಭ ಮತ್ತು ಸಾಗರ ಗರ್ಭ ಶಾಸ್ತ್ರಜ್ಞರ ತಂಡ ಬರ್ಮುಡಾ ನಿಗೂಢ ಪತ್ತೆ ಹಚ್ಚಲು ಕಳೆದ ಆರು ತಿಂಗಳಿಂದ ನಿರಂತರ ಶ್ರಮವಹಿಸಿತ್ತು. ಅವರಿಗೆ ಕಲ್ಪನೆಗೆ ನಿಲುಕದ ವಿಚಿತ್ರವಾದ ಷಟ್ಕೋನಾಕೃತಿಯ ಮೋಡಗಳು ಗೋಚರಿಸಿವೆ. ಅದು ಸಾಗರದ ಮೇಲ್ಮೈ ಮೇಲೆ ಮೃತ್ಯಕೂಪಗಳಂತೆ ತೇಲಾಡುತ್ತಿರುವುದು ಕಂಡು ಬಂದಿದೆ. ಈ ಮೋಡಗಳು ಸಮುದ್ರದ ಮೇಲ್ಮೈ ಮೇಲೆ 20 ರಿಂದ 50 ಮೈಲಿಗಳವರೆಗೆ ಒಮ್ಮಿಂದೊಮ್ಮೆಲೆ ಹಠಾತ್ತನೆ ವಿಸ್ತರಿಸಿ ಸಾಗರದಲ್ಲಿ ಆಳವಾದ ಕಂದಕವನ್ನು ನಿರ್ಮಿಸಿ ಬಿಡುತ್ತವೆ. ದಿನದ ಬಹುತೇಕ ಸಮಯ ಇಂತಹದ್ದೆ ಕ್ರಿಯೆ ಅಲ್ಲಿ ನಡೆಯುತ್ತಿರುವುದರಿಂದ, ನೌಕೆಗಳು ಮತ್ತು ವಿಮಾನಗಳು ಆ ಪ್ರದೇಶದಲ್ಲಿ ಹೋದಾಗ ಆಪೋಶನ ತೆಗೆದುಕೊಳ್ಳುತ್ತವೆ. ಇಂತಹ ಮಾಹಿತಿಯನ್ನು ನೀಡುವ ಉಪಗ್ರಹ ಪ್ರತಿಬಿಂಬ ಚಿತ್ರವನ್ನು ವಿಜ್ಞಾನಿಗಳು ಬಿಡುಗಡೆ ಮಾಡಿದ್ದು, ಚಿತ್ರ ಭಯಂಕರವಾಗಿದೆ ಎಂದು ಅವರೇ ಉದ್ಗಾರ ತೆಗೆಯುತ್ತಾರೆ.
 
ಸಾಗರ ಪ್ರದೇಶದಲ್ಲಿನ ಇಂತಹ ಷಟ್ಕೋನಾಕೃತಿ ಮೋಡಗಳು ವಾಯು ಬಾಂಬ್ ನಿರ್ಮಾಣಕ್ಕೆ ಕಾರಣವಾಗುತ್ತವೆ. ಇದು ಆವಾಗೀವಾಗ ಸೂಕ್ಷ್ಮ ಸ್ಫೋಟಗಳನ್ನು ನಡೆಸುತ್ತಲೇ ಇರುತ್ತದೆ. ಗಾಳಿ ತುಸು ಜೋರಾಗಿ ಬೀಸಿದಾಗ ಸ್ಫೋಟದ ತೀವ್ರತೆ ಹಿಸಲಾಗದಷ್ಟು ತೀವ್ರವಾಗಿರುತ್ತದೆ. ಗಂಟೆಗೆ 170 ಮೈಲಿ ವೇಗದ ಚಂಡಮಾರುತದಂತೆ ಆ ಪ್ರದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿ ಬಿಡುತ್ತದೆ. ಪರಿಣಾಮ ನೌಕೆಗಳು ಮತ್ತು ವಿಮಾನಗಳು ತರಗೆಲೆಗಳಂತೆ ಸಾಗರದಾಳದಲ್ಲಿ ಹೂತು ಹೋಗುತ್ತವೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೃತ್ಯ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ ನಟಿ