Select Your Language

Notifications

webdunia
webdunia
webdunia
webdunia

ನೃತ್ಯ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ ನಟಿ

ನೃತ್ಯ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ ನಟಿ
ಪುಣೆ , ಸೋಮವಾರ, 24 ಅಕ್ಟೋಬರ್ 2016 (09:08 IST)
ಪುಣೆ: ಖ್ಯಾತ ಭರತನಾಟ್ಯ ಡಾನ್ಸರ್, ಮರಾಠಿ ಚಿತ್ರನಟಿ ಅಶ್ವಿನಿ ಎಕೋದೆ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಭರತನಾಟ್ಯ ಮಂದಿರದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದರು. ಆದರೆ ಅದೇಕೋ ಸುಸ್ತಾದಂತೆ ಕಂಡು ಹಠಾತ್ ಕುಸಿದು ಬಿದ್ದರು. ತಡಮಾಡದೇ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆಗೂ ಮೊದಲು ಅವರು ಸಾವಪ್ಪಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನಟಿ ಅಶ್ವಿನಿ ಕ್ಷಣ ಹ್ಹ ಮೊಹಂಚಾ, ದಂಕ್ಯಾವರ್ ದಂಕಾ, ಹೈ ಕಮಾಂಡ್ ಸೇರಿದಂತೆ ಹಲವು ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪುಣೆಯ ಖ್ಯಾತ ಕಲಾವಿದರ ಜತೆ ಅವರು ಹೆಜ್ಜೆ ಹಾಕಿ ತನ್ನ ಕೀರ್ತಿಯನ್ನು ರಾಷ್ಟ್ರಾದ್ಯಂತ ಪಸರಿಸಿಕೊಂಡಿದ್ದರು. ಅವರ ಭಿನ್ನ, ವಿಭಿನ್ನ ನೃತ್ಯಕ್ಕೆ ಸಾಕಷ್ಟು ಪ್ರಾಶಸ್ತ್ಯಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಅಲ್ಲದೆ, ಅಪಾರ ಶಿಷ್ಯ ಬಳಗವನ್ನು ಅವರು ಹುಟ್ಟುಹಾಕಿ, ನೃತ್ಯ ಕಲೆಯನ್ನು ಪೋಷಿಸಿದ್ದರು. ಅವರ ಅಕಾಲಿಕ ನಿಧಾನದಿಂದ ಪುಣೆಯ ಸಾಂಸ್ಕೃತಿಕ ಲೋಕ ಬಡವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರ ಮಟ್ಟಹಾಕಿ, ಇಲ್ದಿದ್ರೆ ಎದುರಾಗೋ ಅಪಾಯಕ್ಕೆ ರೆಡಿಯಾಗಿ: ಪಾಕ್‌ಗೆ ದೊಡ್ಡಣ್ಣನ ಎಚ್ಚರಿಕೆ