Select Your Language

Notifications

webdunia
webdunia
webdunia
webdunia

ಸಿಕ್ಕಿಂನಲ್ಲಿ ಮಿನರಲ್ ನೀರಿನ ಬಾಟಲ್ಗೆ ನಿಷೇಧ

ಸಿಕ್ಕಿಂನಲ್ಲಿ ಮಿನರಲ್ ನೀರಿನ ಬಾಟಲ್ಗೆ ನಿಷೇಧ
ಸಿಕ್ಕಿಂ , ಭಾನುವಾರ, 3 ಅಕ್ಟೋಬರ್ 2021 (09:10 IST)
ಸಿಕ್ಕಿಂ : ಸಿಕ್ಕಿಂನಲ್ಲಿ ಮಿನರಲ್ ನೀರಿನ ಬಾಟಲ್ ಮಾರಾಟವನ್ನು ಜ.1ರಿಂದ ಸಂಪೂರ್ಣವಾಗಿ ನಿಷೇಧಿಸಿರುವುದಾಗಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಘೋಷಿಸಿದ್ದಾರೆ.
Photo Courtesy: Google

ಗಾಂಧಿ ಜಯಂತಿ ಪ್ರಯುಕ್ತ ನಡೆಸಲಾದ ಸ್ವತ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಘೋಷಣೆ ಮಾಡಿದ್ದಾರೆ. ನಿಷೇಧ ಜಾರಿಗೆ ಬಂದ ನಂತರ ಮಾರುಕಟ್ಟೆಯಲ್ಲಿ ಸಂಗ್ರಹವಿರುವ ನೀರಿನ ಬಾಟಲ್ಗಳನ್ನು ಖಾಲಿ ಮಾಡಲು 3 ತಿಂಗಳ ಕಾಲಾವಕಾಶ ಕೊಡಲಾಗುವುದು ಎಂದರು.
ರಾಜ್ಯದಲ್ಲಿ ಶುದ್ಧ ನೀರು ಕೊಡುವ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಜನರು ಮಿನರಲ್ ನೀರಿನ ಬಾಟಲ್ ಬದಲು ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡಬೇಕು ಎಂದರು.
ಇತರ ರಾಜ್ಯಗಳಿಂದ ಬರುವ ಪ್ರವಾಸಿಗರು ನೀರಿನ ಬಾಟಲ್ಗಳನ್ನು ಬಳಕೆ ಮಾಡಿ ತ್ಯಾಜ್ಯ ಸೃಷ್ಟಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು ಸಿಎಂ.


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿಂದು ಕೊರೋನಾಗೆ 123 ಬಲಿ