Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಸೇನಾ ಹೆಲಿಕಾಪ್ಟರ್ ಪತನ !

ಆಸ್ಟ್ರೇಲಿಯಾ ಸೇನಾ ಹೆಲಿಕಾಪ್ಟರ್ ಪತನ !
ಕ್ಯಾನ್ಬೆರಾ , ಸೋಮವಾರ, 31 ಜುಲೈ 2023 (07:18 IST)
ಕ್ಯಾನ್ಬೆರಾ : ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದ ಆಸ್ಟ್ರೇಲಿಯಾದ ರಕ್ಷಣಾ ಹೆಲಿಕಾಪ್ಟರ್ ಕ್ವೀನ್ಸ್ಲ್ಯಾಂಡ್ನ ಹ್ಯಾಮಿಲ್ಟನ್ ದ್ವೀಪದ ಬಳಿ ಪತನಗೊಂಡಿದ್ದು, ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಯುನೈಟೆಡ್ ಸ್ಟೇಟ್ಸ್ನೊಂದಿಗೆ ಆಸ್ಟ್ರೇಲಿಯಾದ ಹೆಲಿಕಾಪ್ಟರ್ ಜಂಟಿ ಕಾರ್ಯಾಚರಣೆ ನಡೆಸುತ್ತಿತ್ತು. ಶುಕ್ರವಾರ ರಾತ್ರಿ 10:30 ರ ಹೊತ್ತಿಗೆ MRH-90  ತೈಪಾನ್ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಹೇಳಿದ್ದಾರೆ. 

ಹೆಲಿಕಾಪ್ಟರ್ನಲ್ಲಿದ್ದ ನಾಲ್ವರೂ ಆಸ್ಟ್ರೇಲಿಯದವರು. ಈ ಅಪಘಾತ ನಿಜಕ್ಕೂ ಭಯಾನಕ ಕ್ಷಣವಾಗಿದೆ. ಕಣ್ಮರೆಯಾದ ಸಿಬ್ಬಂದಿ ಕುಟುಂಬದವರಿಗೆ ಈ ಘಟನೆಯ ಬಗ್ಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರ ಉಡುಪಿ ಜಿಲ್ಲೆಗೆ ಹೋಗಲಿರುವ ಸಿಎಂ