Select Your Language

Notifications

webdunia
webdunia
webdunia
webdunia

ಕಾಲಿಗೆ ಬ್ಯಾಂಡೇಜ್ ಧರಿಸಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು

ಕಾಲಿಗೆ ಬ್ಯಾಂಡೇಜ್ ಧರಿಸಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು
ಫಿಲಿಪೈನ್ಸ್ , ಗುರುವಾರ, 19 ಡಿಸೆಂಬರ್ 2019 (06:21 IST)
ಫಿಲಿಪೈನ್ಸ್: ಕಾಲಿಗೆ ಬೂಟು ಧರಿಸದೆ ಬ್ಯಾಂಡೇಜ್ ಹಾಕಿಕೊಂಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ  11 ವರ್ಷದ ಕ್ರೀಡಾಪಟು ಒಬ್ಬಳು ಸ್ಪರ್ಧೆಯಲ್ಲಿ ಗೆದ್ದು ಚಿನ್ನದ ಪದಕ  ಪಡೆದುಕೊಂಡ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.



ಫಿಲಿಪೈನ್ಸ್ ನ ಇಲೋಯಿಲೋ ಪ್ರಾಂತ್ಯದ ಶಾಲೆಯಲ್ಲಿ ಇಂಟರ್ ಸ್ಕೂಲ್ ಅಥ್ಲೀಟ್ಸ್ ಮೀಟ್ ಆಯೋಜಿಸಲಾಗಿತ್ತು. ಇದರಲ್ಲಿ ರಿಯಾ ಬುಲೋಸ್ ಕೂಡ ಭಾಗವಹಿಸಿದ್ದಳು. ಆದರೆ ಆಕೆಗೆ ಸ್ಪೋಟ್ಸ್ ಶೂ ಖರೀದಿಸಲು ಹಣವಿರಲಿಲ್ಲ. ಆದಕಾರಣ ಆಕೆ ಕಾಲಿಗೆ ಬ್ಯಾಂಡೇಜ್ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ.


ರಿಯಾ 400, 800 ಮತ್ತು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ವಿಭಾಗದಲ್ಲಿ ಗೆದ್ದು ಚಿನ್ನದ ಪದಕ ಗಳಿಸಿದ್ದಾಳೆ. ಈಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಈಕೆಗೆ ನೆರವು ನೀಡಲು ಮುಂದಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈಲ್ವೆ ಅಂಡರ್ ಪಾಸ್ ನಲ್ಲಿ ನಡೆಯುತ್ತಿದೆಯಾ ಅಂಥ ಕೆಲಸ?