Select Your Language

Notifications

webdunia
webdunia
webdunia
webdunia

ಅಮೆರಿಕದ ಅತಿದೊಡ್ಡ ಬ್ಯಾಂಕ್ ಬಂದ್ !?

ಅಮೆರಿಕದ ಅತಿದೊಡ್ಡ ಬ್ಯಾಂಕ್ ಬಂದ್ !?
ವಾಷಿಂಗ್ಟನ್ , ಸೋಮವಾರ, 13 ಮಾರ್ಚ್ 2023 (07:54 IST)
ವಾಷಿಂಗ್ಟನ್ : ಸ್ವೀಸ್ ಬ್ಯಾಂಕ್ ನಷ್ಟದ ಬೆನ್ನಲ್ಲೇ ಸ್ಟಾರ್ಟ್ಅಪ್ಗಳಿಗೆ ಸಾಲ ನೀಡಲು ಹೆಸರುವಾಸಿಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.
 
ಟೆಕ್ ಸ್ಪಾರ್ಟ್ಅಪ್ಗಳಿಗೆ ಮೂಲ ಕಂಪನಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಠೇವಣಿದಾರರು ಹಾಗೂ ಹೂಡಿಕೆದಾರರು ಬರೋಬ್ಬರಿ 282 ಲಕ್ಷ ಕೋಟಿ ರೂ. (42 ಬಿಲಿಯನ್ ಯುಎಸ್ ಡಾಲರ್) ಬೃಹತ್ ಮೊತ್ತದ ಹಣವನ್ನು ಹಿಂಪಡೆದ ಪರಿಣಾಮ ಬ್ಯಾಂಕ್ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿತ್ತು. ಈ ಕಾರಣದಿಂದಾಗಿ ಬ್ಯಾಂಕ್ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ಅಧಿಕಾರಿಗಳು ಶುಕ್ರವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದು ಅತಿದೊಡ್ಡ ಬ್ಯಾಂಕಿಂಗ್ನ ವೈಫಲ್ಯವಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಕಂಪನಿಗಳಿಗೆ ಹಾಗೂ ವೆಂಚರ್ ಕ್ಯಾಪಿಟಲಿಸ್ಟ್ ಹೊಂದಿರುವ ಕಂಪನಿಗಳಿಗೆ ಈ ಬ್ಯಾಂಕ್ ಬೆಂಬಲ ನೀಡಿದೆ. ಅದಲ್ಲದೆ, ಪ್ರಸ್ತುತ ಉದ್ಯಮದ ಪ್ರತಿಷ್ಠಿತ ಬ್ರ್ಯಾಂಡ್ ಆಗಿರುವ ಕಂಪನಿಯನ್ನೂ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬೆಂಬಲಿಸಿತ್ತು.

ಇದರಿಂದಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್ನಲ್ಲಿ ಆರ್ಥಿಕ ಕುಸಿತ ಉಂಟಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಎಸ್ವಿಬಿ ಷೇರು ಮೌಲ್ಯ ಕುಸಿತ ಕಂಡಿತ್ತು. ಇದರ ಪರಿಣಾಮವಾಗಿ 80 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 18% ಕರೆಂಟ್ ಕೊರತೆ