ಅಹಮದಾಬಾದ್ : ಅದಾನಿ ಸಮೂಹದ ಕಂಪನಿಗಳ 15,446 ಕೋಟಿ ರೂ. ಮೌಲ್ಯದ ಷೇರುಗಳನ್ನು ಅಮೆರಿಕದ ಉಕಿಉ ಕಂಪನಿ ಖರೀದಿಸಿದೆ.
ಅಮೆರಿಕದ ಹಿಂಡೆನ್ಬರ್ಗ್ ವರದಿಯಿಂದ ಅದಾನಿ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರೀ ಇಳಿಕೆಯಾಗಿತ್ತು. ಈ ಮಧ್ಯೆ ಉಕಿಉ ಕಂಪನಿ ಹೂಡಿಕೆ ಮಾಡುವ ಮೂಲಕ ಸಂಕಷ್ಟದಿಂದ ಪಾರು ಮಾಡಿದೆ. ಎಸ್ಬಿ ಅದಾನಿ ಫ್ಯಾಮಿಲಿ ಟ್ರಸ್ಟ್ ಈ ಷೇರುಗಳನ್ನು ಮಾರಾಟ ಮಾಡಿದೆ.
ಉಕಿಉ ಅಧ್ಯಕ್ಷ ಮತ್ತು ಸಿಐಒ ರಾಜೀವ್ ಜೈನ್ ಪ್ರತಿಕ್ರಿಯಿಸಿ, “ನಾನು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ. ಅದಾನಿ ಕಂಪನಿಗಳು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ದೊಡ್ಡ ಮತ್ತು ಪ್ರಮುಖ ಮೂಲಸೌಕರ್ಯ ಸ್ವತ್ತುಗಳನ್ನು ಹೊಂದಿವೆ ಮತ್ತು ನಿರ್ವಹಿಸುತ್ತವೆ.
ಗೌತಮ್ ಅದಾನಿ ಈ ಪೀಳಿಗೆಯ ಅತ್ಯುತ್ತಮ ಉದ್ಯಮಿಯಾಗಿದ್ದಾರೆ. ಭಾರತದ ಆರ್ಥಿಕತೆ ಮತ್ತು ಇಂಧನ ಮೂಲಸೌಕರ್ಯವನ್ನು ಮುನ್ನಡೆಸಲು ಸಹಾಯ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ನಾವು ಸಂತೋಷಪಡುತ್ತೇವೆ ಎಂದು ತಿಳಿಸಿದ್ದಾರೆ.