Publish Date: Sat, 29 Oct 2022 (10:15 IST)
Updated Date: Sat, 29 Oct 2022 (10:17 IST)
ವಾಷಿಂಗ್ಟನ್ : ವಜಾಗೊಂಡಿರುವ ಸಿಇಒ ಪರಾಗ್ ಅಗರ್ವಾಲ್ ಅವರಿಗೆ ಟ್ವಿಟ್ಟರ್ ಕಂಪನಿ 345 ಕೋಟಿ ರೂ. ಪರಿಹಾರ ಪ್ಯಾಕೇಜ್ ನೀಡುವ ಸಾಧ್ಯತೆಯಿದೆ.
ಎಲಾನ್ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಲಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಪರಾಗ್ ಅಗರ್ವಾಲ್ ಅವರನ್ನೂ ವಜಾಗೊಳಿಸಬಹುದು ಎಂಬ ಸುದ್ದಿ ಏಪ್ರಿಲ್ನಲ್ಲೇ ಪ್ರಕಟವಾಗಿತ್ತು.
ಈಗ ಆ ಸುದ್ದಿ ನಿಜವಾಗಿದ್ದು ಪರಾಗ್ ಜೊತೆ ಪ್ರಮುಖ ಹುದ್ದೆಯಲ್ಲಿದ್ದವರನ್ನು ವಜಾಗೊಳಿಸಲಾಗಿದೆ.
ದಿಢೀರ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಕಂಪನಿ ಪರಾಗ್ ಅಗರ್ವಾಲ್ ಅವರಿಗೆ 42 ದಶಲಕ್ಷ ಡಾಲರ್(ಅಂದಾಜು 345,71,45,328 ರೂ.) ಪ್ಯಾಕೇಜ್ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.