Webdunia - Bharat's app for daily news and videos

Install App

ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!

Webdunia
ಬುಧವಾರ, 24 ನವೆಂಬರ್ 2021 (11:01 IST)
ಕ್ರೊಯೇಷಿಯಾ : ಒಂಟಿತನ ಅನ್ನೋದೇ ಹಾಗೆ, ಮನುಷ್ಯನನ್ನು ಚಿಂತಾಕ್ರಾಂತನನ್ನಾಗಿಯೋ, ಮಾನಸಿಕ ಅಸ್ವಸ್ಥತರನ್ನಾಗಿಯೋ ಅಥವಾ ಜೀವನೋತ್ಸಾಹದಿಂದ ವಿಮುಖವಾಗುವಂತೋ ಒಮ್ಮೊಮ್ಮೆ ಮಾಡಿಬಿಡುತ್ತದೆ.
ಒಂಟಿತನ ನಿವಾರಣೆಗೆ ಇಲ್ಲೊಬ್ಬ ಮಹಿಳೆ ನಾಯಿಯನ್ನೇ ಮದುವೆಯಾಗಿ ಸಂಗಾತಿಯನ್ನಾಗಿಸಿಕೊಂಡಿದ್ದಾಳೆ.
ಹೀಗೆ ನಾಯಿಯನ್ನು ಮದುವೆಯಾದವಳ ಹೆಸರು “ಅಮಂಡಾ ರಾಡ್ಜರ್ಸ್” ಅಂತ. ಕ್ರೊಯೇಷಿಯಾದಲ್ಲಿ ವಾಸಮಾಡುತ್ತಿರುವ ಅಮಂಡಾ ರಾಡ್ಜರ್ಸ್ ವಿಚ್ಛೇದಿತ ಮಹಿಳೆ. ವಿಚ್ಛೇದನ ಬಳಿಕ ಆಕೆಗೆ ಒಂಟಿತನ ಕಾಡಾಲಾರಂಭಿಸಿತು. ಸರಿಯಾದ ಜೀವನ ಸಂಗಾತಿಯಾಗಿ ಹುಡುಕಾಡುತ್ತಿದ್ದ ಅಮಂಡಾ ಸರಿಯಾದ ಜೀವನ ಸಂಗಾತಿಯನ್ನು ಕೊನೆಗೂ ಹುಡುಕಿ ಎರಡನೇ ಬಾರಿಗೆ ಮದುವೆಯಾಗಲು ಮುಂದಾಗುತ್ತಾಳೆ.
ಮನುಷ್ಯನನ್ನು ವಿವಾಹವಾಗಲು ಹಿಂಜರಿದ ಅಮಂಡಾ ಹೆಣ್ಣು ನಾಯಿಯೊಂದನ್ನ ಜೀವನ ಸಂಗಾತಿಯನ್ನಾಗಿಸಿಕೊಳ್ಳುತ್ತಾಳೆ.ಅಂದ್ಹಾಗೆ ಈ ಹೆಣ್ಣು ನಾಯಿ ಹೆಸರು “ಶೆಭಾ”. ಇದರ ವಯಸ್ಸು 3 ತಿಂಗಳು.
ಹೆಣ್ಣು ನಾಯಿಯನ್ನು ಸಂಗಾತಿಯನ್ನಾಗಿಸಿಕೊಳ್ಳುವುದು ಕೆಲವರಿಗೆ ಆಶ್ಚರ್ಯವಾಗಬಹುದು. ಕೆಲವರಿಗೆ ಇದು ವಿಚಿತ್ರವೂ ಅನಿಸಬಹುದು. ಹೀಗೆ ಆಶ್ಚರ್ಯವ್ಯಕ್ತಪಡಿಸಿ ಕೇಳಿದವರ ಪ್ರಶ್ನೆಗೆ ಉತ್ತರಿಸಿರುವ ಅಮಂಡಾ “ಶೆಭಾ ತನ್ನ ಜೀವನದ ಪ್ರಮುಖದ ಪ್ರಮುಖ ಭಾಗ ನಾಯಿ. ನಕ್ಕು ಸಂತೋಷ ಪಡಿಸುವ ಈಕೆ ನಾನು ಅಸಮಾಧಾನಗೊಂಡಾಗ ಬೆಂಬಲ ನೀಡುತ್ತಾಳೆ” ಎಂದಿದ್ದಾಳೆ.
ಶೆಭಾ 2 ತಿಂಗಳಿದ್ದಾಗಲೇ ಅಮಂಡಾಗೆ ಶೆಭಾ ಮೇಲೆ ಪ್ರೀತಿ ಅಂಕುರವಾಗಿತ್ತಂತೆ. ಗಂಡನಿಗಿಂತ ಶೆಭಾಳನ್ನು ಹೆಚ್ಚು ಪ್ರೀತಿಸೋದಾಗಿ ಅಮಂಡಾ ಹೇಳಿದ್ದಾಳೆ. ನನ್ನ ಮತ್ತು ಶೆಬಾ ನಡುವಿನ ಸಂಬಂಧವು ತುಂಬಾ ಆಳವಾಗಿದೆ ಮತ್ತು ಈ ಹೊಸ ಸಂಬಂಧದ ಬಗ್ಗೆ ತುಂಬಾ ಕುತೂಹಲವಿರುವುದಾಗಿಯೂ ತಿಳಿಸಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments