Webdunia - Bharat's app for daily news and videos

Install App

ಶಾಕಿಂಗ್:ತಂದೆಯ ಶವದೊಟ್ಟಿಗೇ ವಾಸ ಮಾಡುತ್ತಿದ್ದ ಪುತ್ರ !

Webdunia
ಬುಧವಾರ, 24 ನವೆಂಬರ್ 2021 (09:48 IST)
ತಂದೆ ಮೃತಪಟ್ಟು ಮೂರು ತಿಂಗಳಾದರೂ ಅವರ ದೇಹವನ್ನು ಮಣ್ಣು ಮಾಡದೆ, ಆ ಶವದೊಂದಿಗೆ ಮೂರು ತಿಂಗಳು ಕಳೆದ 40ವರ್ಷದ ಮಗನನ್ನು ಇದೀಗ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಶಾಕಿಂಗ್ ಘಟನೆ ನಡೆದದ್ದು ಕೋಲ್ಕತ್ತದಲ್ಲಿ. ಮೃತ ವ್ಯಕ್ತಿಯ ಹೆಸರು ಸಂಗ್ರಾಮ್ ಡೇ. ಅವರಿಗೆ 70 ವರ್ಷವಾಗಿತ್ತು. ವಯೋಸಹಜ ಸಮಸ್ಯೆಯಿಂದ ಮೃತಪಟ್ಟಿದ್ದರು.  ಆದರೆ ಅವರ ಮಗ ಕೌಶಿಕ್ ಡೇ  ಆ ಶವವನ್ನು ಏನೂ ಮಾಡಲಾಗದೆ ಅದರೊಂದಿಗೆ ಮೂರು ತಿಂಗಳಿಂದ ವಾಸವಾಗಿದ್ದ.
ಪುತ್ರ ಕೌಶಿಕ್ ಮಾನಸಿಕವಾಗಿ ಸ್ಥಿಮಿತದಲ್ಲಿ ಇಲ್ಲದ ವ್ಯಕ್ತಿ ಎಂದು ಹೇಳಿರುವ ಪೊಲೀಸರು ಇದೀಗ ಶವವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದಾರೆ. ಸಹಜ ಸಾವು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ ಬಳಿಕವಷ್ಟೇ ಎಂದು ಹೇಳಿದ್ದಾರೆ. ಸಂಗ್ರಾಮ್ ಡೇ ಅವರು ಮುಂಬೈನ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ನಲ್ಲಿ ಕೆಲಸ ಮಾಡಿದವರು. ಕೋಲ್ಕತ್ತದ ಕೆ.ಪಿ.ರಾಯ್ ಲೇನ್ನಲ್ಲಿ ಅವರ ಮನೆಯಿತ್ತು. ಇದೀಗ ಅವರ ಶವ ಬಹುತೇಕ ಅಸ್ಥಿಪಂಜರದಂತಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.   ಮೂರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದಾಗಿ ಕೌಶಿಕ್ ತಿಳಿಸಿದ್ದರೂ, ನಿಖರ ಸಮಯ ತಿಳಿಯಲು ಪೋಸ್ಟ್ಮಾರ್ಟಮ್ ರಿಪೋರ್ಟ್ ಬರಬೇಕಿದೆ.
ಇನ್ನೊಂದು ಶಾಕಿಂಗ್ ಸುದ್ದಿಯೆಂದರೆ, ಪತ್ನಿ ಅರುಣಾ ಡೇ (65) ಕೂಡ ಅದೇ ಮನೆಯಲ್ಲಿದ್ದಾರೆ. ಆದರೆ ಅವರಿಗೆ ಎದ್ದು ಓಡಾಡಲೂ ಆಗದಷ್ಟು ಅನಾರೋಗ್ಯ. ಸಂಗ್ರಾಮ್ ಡೇ ಕೆಲವು ದಿನಗಳಿಂದ ಕಾಣುತ್ತಿಲ್ಲ. ಆ ಮನೆ ಸ್ವಲ್ಪ ವಿಭಿನ್ನವಾಗಿ ತೋರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಸುಳಿವು ನೀಡಿದ ಬೆನ್ನಲ್ಲೇ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಆಗ ಅವರು ಸತ್ತಿದ್ದು ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments