Select Your Language

Notifications

webdunia
webdunia
webdunia
webdunia

ಜನನಾಂಗ ಸ್ವಚ್ಛವಾಗಿಡಲು ಏನು ಮಾಡಬೇಕು? ಇಲ್ಲಿದೆ ಸಲಹೆ

ಜನನಾಂಗ ಸ್ವಚ್ಛವಾಗಿಡಲು ಏನು ಮಾಡಬೇಕು? ಇಲ್ಲಿದೆ ಸಲಹೆ
ಬೆಂಗಳೂರು , ಸೋಮವಾರ, 22 ನವೆಂಬರ್ 2021 (09:05 IST)
ಬೆಂಗಳೂರು: ಮಹಿಳೆಯರಿಗೆ ಜನನಾಂಗ ಸ್ವಚ್ಛವಾಗಿಡುವ ಬಗ್ಗೆ ಅನೇಕ ಗೊಂದಲ, ಅನುಮಾನಗಳಿವೆ. ಗುಪ್ತಾಂಗದ ಅಶುಚಿತ್ವದಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಜನನಾಂಗ ಸ್ವಚ್ಛವಾಗಿಡಲು ಏನು ಮಾಡಬೇಕು?

ಮಾರುಕಟ್ಟೆಗಳಲ್ಲಿ ಜನನಾಂಗ ಸ್ವಚ್ಛವಾಗಿಡಲು ಅನೇಕ ಕ್ರೀಂ, ಲೋಷನ್ ಗಳು ಲಭ್ಯವಿದೆ. ಆದರೆ ಯಾವುದೇ ಲೋಷನ್ ಬಳಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಉತ್ತಮ. ಯಾಕೆಂದರೆ ಅತಿಯಾದ ಲೋಷನ್ ಬಳಕೆಯೂ ಒಳ್ಳೆಯದಲ್ಲ.  ಇದರಿಂದ ಜನನಾಂಗದ ಪಿಎಚ್ ಲೆವೆಲ್ ಕಡಿಮೆಯಾಗುವ ಅಪಾಯವಿದೆ.

ಹೀಗಾಗಿ ತಜ್ಞ ವೈದ್ಯರು ಹೇಳುವ ಪ್ರಕಾರ ಜನನಾಂಗ ಸ್ವಚ್ಛವಾಗಿಡಲು ನಾವು ನಿಯಮಿತವಾಗಿ ಬಳಸುವ ಸೋಪ್ ಮತ್ತು ಹದ ಬಿಸಿ ನೀರೇ ಉತ್ತಮ. ಪ್ರತಿ ನಿತ್ಯ ಎರಡು ಬಾರಿ ಹದ ಬಿಸಿ ನೀರಿನಿಂದ ಜನನಾಂಗ ಸ್ವಚ್ಛಗೊಳಿಸಿದರೂ ಸಾಕು. ಜೊತೆಗೆ ಲೂಸ್ ಆದ ಕಾಟನ್ ಒಳ ಉಡುಪುಗಳನ್ನು ಧರಿಸಬೇಕು. ಒಳ ಉಡುಪುಗಳನ್ನು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸುವುದು ಉತ್ತಮ. ಜನನಾಂಗ ಸ್ವಚ್ಛಗೊಳಿಸಿದ ಬಳಿಕ ಶುದ್ಧಬಟ್ಟೆಯಿಂದ ಚೆನ್ನಾಗಿ ಒರೆಸಿಕೊಂಡು ಆ ಭಾಗವನ್ನು ಸ್ವಚ್ಛವಾಗಿಡುವುದರಿಂದ ಹಲವು ಗುಪ್ತಾಂಗ ಸಮಸ್ಯೆಗಳಿಂದ ದೂರವಿರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಬಡವರ ಬಾದಾಮಿ ಕಡಲೆ ಕಾಯಿಯಲ್ಲಿ ಆರೋಗ್ಯದ ಗುಟ್ಟು!