Select Your Language

Notifications

webdunia
webdunia
webdunia
webdunia

ಪಾಪ್ ಕಾರ್ನ್ ತಿಂದು ಹೃದಯ ಸಮಸ್ಯೆಗೆ ಒಳಗಾದ ವ್ಯಕ್ತಿ

ಪಾಪ್ ಕಾರ್ನ್ ತಿಂದು ಹೃದಯ ಸಮಸ್ಯೆಗೆ ಒಳಗಾದ ವ್ಯಕ್ತಿ
ಇಂಗ್ಲೆಂಡ್ , ಗುರುವಾರ, 9 ಜನವರಿ 2020 (06:37 IST)
ಇಂಗ್ಲೆಂಡ್ : ಪಾಪ್ ಕಾರ್ನ್ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಪಾಪ್ ಕಾರ್ನ್ ತಿಂದು ವ್ಯಕ್ತಿಯೊಬ್ಬ ಹೃದಯ ಸಮಸ್ಯೆಗೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


ಆಡಂ ಮಾರ್ಟಿನ್ 41 ವರ್ಷದ ವ್ಯಕ್ತಿ ಒಮ್ಮೆ ಪಾಪ್ ಕಾರ್ನ್ ತಿನ್ನುತ್ತಿದ್ದಾಗ ಅದರ ತುಂಡೊಂದು ಹಲ್ಲಿಗೆ ಸಿಲುಕಿಕೊಂಡಿದೆ. ಅದನ್ನು ತೆಗೆಯಲು ಆತ ಟೂತ್ ಪಿಕ್, ಪೆನ್, ವೈರ್ , ಮೂಳೆ  ಹೀಗೆ ಹಲವು ಚೂಪಾದ ವಸ್ತುಗಳನ್ನು ಬಳಸಿದ್ದಾನೆ. ಇದರಿಂದ ಆತನ ವಸಡು ಗಾಯಗೊಂಡು ಅಲ್ಲಿಯೇ ಇನ್ ಫೆಕ್ಷನ್ ಆಗಿದೆ. ಅಲ್ಲಿದ್ದ ಬ್ಯಾಕ್ಟೀರಿಯಾ ಬಾಯಿ ಮತ್ತು ರಕ್ತನಾಳದ ಮೂಲಕ ಹೃದಯವನ್ನು ಪ್ರವೇಶಿಸಿ ಹೃದ್ರೋಗಕ್ಕೆ ಕಾರಣವಾಗಿದೆ.

 

ಇದೀಗ ಆತ ಆಸ್ಪತ್ರೆ ಸೇರಿ ತೆರೆದ ಹೃದಯ ಶಸ್ತ್ರಚಕಿತ್ಸೆ ಮಾಡಿಕೊಂಡಿಕೊಳ್ಳಬೇಕಾದ ಗತಿ ಬಂದಿದೆ. ಅಂದೇ ದಂತ ವೈದ್ಯರ ಬಳಿ ಹೋಗಿ ಅದನ್ನು ತೆಗೆಸಿದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಈಗ ಆತ ಕೊರಗುತ್ತಿದ್ದಾನೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಸಗಣಿಯಿಂದ ಅಲಂಕರಿಸಿದ ಕಾರಿನಲ್ಲಿ ಮಗಳನ್ನು ಪತಿಯ ಮನೆಗೆ ಕಳುಹಿಸಿದ ವೈದ್ಯ