ಜಪಾನ್ : ಆರೋಗ್ಯಕ್ಕೆ ಹಾನಿಕಾರಕವಾದ ಧೂಮಪಾನದಿಂದ ತಮ್ಮ ನೌಕರರನ್ನು ಕಾಪಾಡಲು ಜಪಾನ್ ಕಂಪೆನಿಯೊಂದು ಭರ್ಜರಿ ಆಫರ್ ವೊಂದನ್ನು ಘೋಷಿಸಿದೆ.
ಜಪಾನ್ ನ ಸಾಪ್ಟ್ ವೇರ್ ಕಂಪೆನಿ ಧೂಮಪಾನ ಮಾಡದ ನೌಕರರಿಗೆ ವೇತನ ಸಹಿತ 6 ರಜೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಕಂಪೆನಿಯ 120 ನೌಕರರಲ್ಲಿ 30 ನೌಕರರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.
ಅಲ್ಲದೇ ಕಂಪೆನಿಯ ಕಚೇರಿ 29ನೇ ಮಹಡಿಯಲ್ಲಿ ಇದ್ದುದ್ದರಿಂದ ನೆಲಮಹಡಿಗೆ ಬಂದು ಸಿಗರೇಟು ಸೇದಲು 15 ನಿಮಿಷ ವ್ಯರ್ಥವಾಗುತ್ತಿತ್ತು. ಇದು ಕೆಲಸದ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ನಿವಾರಿಸಲು ಕಂಪೆನಿ ಈ ಉಪಾಯ ಮಾಡಿದೆ ಎನ್ನಲಾಗಿದೆ.