ನವದೆಹಲಿ(ಆ.13): ಕೊರೋನಾ ವೈರಸ್ ಲಸಿಕೆಗೆ ಹಾಹಾಕಾರ ಇದೆ. ಭಾರತದ ಹಲವು ರಾಜ್ಯಗಳಲ್ಲಿ ಎದುರಾಗಿರುವ ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರ ನಿರಂತರ ಪೂರೈಕೆ ಮಾಡುತ್ತಿದೆ. ಆದರೆ ಕೆಲ ರಾಷ್ಟ್ರಗಳಲ್ಲಿ ಇನ್ನೂ ಲಸಿಕೆಗೆ ಸಿಕ್ಕಿಲ್ಲ. ಆದರೆ ಲಸಿಕೆ ಮಾರುಕಟ್ಟೆ ಬಂದ ಆರಂಭದಲ್ಲಿ ಲಸಿಕೆ ಪಡೆಯದಂತೆ ಸುಳ್ಳು ವದಂತಿಗಳನ್ನು ಹಬ್ಬಲಾಗಿತ್ತು. ಲಸಿಕೆಯಿಂದ ಅಪಾಯ ಹೆಚ್ಚು ಎಂದು ಹಬ್ಬಲಾಗಿತ್ತು. ಹೀಗೆ ಲಸಿಕೆ ಕುರಿತು ಸುಳ್ಳು ಮಾಹಿತಿ ಹರಡಿದ 300 ಫೇಸ್ಬುಕ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
ಫೈಜರ್, ಅಸ್ಟ್ರಾಜೆನಿಕಾ ಲಸಿಕೆ ಪಡೆದರೆ ಮನುಷ್ಯರು ಚಿಂಪಾಂಜಿಗಳಾಗುತ್ತಾರೆ ಎಂದು ಸುಳ್ಳು ಹರಡಲಾಗಿತ್ತು. ಈ ಸುಳ್ಳು ಸುದ್ಧಿಗಳು ರಷ್ಯಾದ ಕೆಲ ನೆಟ್ವರ್ಕ್ ಜಾಲದಿಂದ ಪೋಸ್ಟ್ ಮಾಡಲಾಗಿದೆ. ಆದರೆ ಭಾರತ, ಲ್ಯಾಟಿನ್ ಅಮೆರಿಕ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಬಳಕೆದಾರರನ್ನು ಗುರಿಯಾಗಿಸಿ ಹರಡಲಾಗುತ್ತಿತ್ತು.
2020ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಈ ಕುರಿತು ಸುಳ್ಳು ಸುದ್ದಿಗಳನ್ನು ಮೆಮೆಗಳನ್ನು ಪೋಸ್ಟ್ ಮಾಡಿ, ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿತ್ತು. ಮೇ, 2021ರಲ್ಲಿ ಮತ್ತೆ ಅಸ್ಟ್ರಾಜೆನಿಕಾ ಲಸಿಕೆಯ ಕೆಲ ಮಾಹಿತಿಗಳನ್ನು ಕದ್ದು, ಅದನ್ನು ಫೇಸ್ಬುಕ್ ಮೂಲಕ ಪೋಸ್ಟ್ ಮಾಡಲಾಗಿತ್ತು. ಆದರೆ ಈ ಪೋಸ್ಟ್ನಲ್ಲಿ ಕೆಲ ಬದಲಾವಣೆ ಮಾಡಿ ತಪ್ಪು ಮಾಹಿತಿ ಹರಡಲಾಗಿದೆ.
ಅಸ್ಟಜೆನಿಕಾ ಲಸಿಕೆ ಚಿಂಪಾಜಿಗಳ ಜೀನ್ ತೆಗೆದು ಮಾಡಲಾಗಿದೆ. ಈ ಲಸಿಕೆಯಿಂದ ಕೊರೋನಾ ನಿಯಂತ್ರಿಸಬಹುದು. ಆದರೆ ಮನುಷ್ಯ ಚಿಂಪಾಯಾಗಿ ಬದಲಾಗುತ್ತಾನೆ. ಹೆಚ್ಚು ಆರೋಗ್ಯವಂತರೂ ಚಿಂಪಾಜಿಗಳಂತೆ ವರ್ತಿಸುತ್ತಾರೆ ಎಂದು ಸುಳ್ಳು ಹರಡಲಾಗಿತ್ತು. ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದ 10,000 ಪೋಸ್ಟ್ಗಳನ್ನು ಫೇಸ್ಬುಕ್ ನಿಯಂತ್ರಿಸಿದೆ.
300 ಖಾತೆಗಳನ್ನು ಶಾಶ್ವತವಾಗಿ ಫೇಸ್ಬುಕ್ ಬ್ಯಾನ್ ಮಾಡಿದೆ. ಇನ್ನು ವಿದೇಶಿ ಹಸ್ತಕ್ಷೇಪ ಕುರಿತು ವಿರುದ್ಧ ಫೇಸ್ಬುಕ್ ನಿಯಮ ಉಲ್ಲಂಘಿಸಿದ 65 ಫೇಸ್ಬುಕ್ ಹಾಗೂ 243 ಇನ್ಸ್ಟಾಗ್ರಾಂ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಕೆಲ ನೆಟ್ವರ್ಕ್ ಈ ರೀತಿ ಸುಳ್ಳು ಸುದ್ದಿ ಹರಡುತ್ತಿದೆ. ಹೀಗಾಗಿ ತಪ್ಪು ಮಾಹಿತಿ ಹರಡುವ ಎಲ್ಲಾ ಫೇಸ್ಬುಕ್ ಖಾತೆಯನ್ನು ಬ್ಯಾನ್ ಮಾಡಲು ಫೇಸ್ಬುಕ್ ಮುಂದಾಗಿದೆ.