Select Your Language

Notifications

webdunia
webdunia
webdunia
webdunia

ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 17 ಮಂದಿ ಸಾವು!

ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 17 ಮಂದಿ ಸಾವು!
ನೇಪ್ಯಿಡಾವ್ , ಶನಿವಾರ, 12 ಆಗಸ್ಟ್ 2023 (09:39 IST)
ನೇಪ್ಯಿಡಾವ್ : ಮ್ಯಾನ್ಮಾರ್ನ ರಾಖೈನ್ ಪ್ರಾಂತ್ಯದಿಂದ ರೊಹಿಂಗ್ಯಾ ವಲಸಿಗರನ್ನು ಮಲೇಷ್ಯಾಕ್ಕೆ ಹೊತ್ತೊಯ್ಯುತ್ತಿದ್ದ ಬೋಟ್ ಸಮುದ್ರದಲ್ಲಿ ಮುಳುಗಿ 17 ಜನ ಮೃತಪಟ್ಟ ಘಟನೆ ನಡೆದಿದೆ.

ಬೋಟ್ನಲ್ಲಿ 50 ಕ್ಕೂ ಹೆಚ್ಚು ಜನ ಇದ್ದರು ಎನ್ನಲಾಗಿದೆ. ಹುಡುಕಾಟದ ವೇಳೆ 17 ಶವಗಳನ್ನು ಪತ್ತೆಹಚ್ಚಲಾಗಿದೆ. ಬದುಕುಳಿದವರಲ್ಲಿ ಎಂಟು ಪುರುಷರಿದ್ದಾರೆ. ದುರ್ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ನಡೆಸುತ್ತಿದ್ದಾರೆ. ಕಣ್ಮರೆಯಾದ 25 ಮಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ರಾಖೈನ್ ಪ್ರಧಾನವಾಗಿ ಬೌದ್ಧ ಮ್ಯಾನ್ಮಾರ್ನ ಪ್ರದೇಶವಾಗಿದ್ದು, ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರನ್ನು ಹೊಂದಿದೆ. ಅವರನ್ನು ನೆರೆಯ ಬಾಂಗ್ಲಾದೇಶದಿಂದ ವಲಸಿಗರು ಎಂದು ವರ್ಗೀಕರಿಸಲಾಗಿದೆ. ಈ ಪ್ರದೇಶದಲ್ಲಿ ಪೌರತ್ವ ನಿರಾಕರಿಸಿರುವುದರಿಂದ ಅವರು ಸಮಸ್ಯೆಗಳನ್ನು ಎದುರಿಸುತ್ತಾರೆ. ರೊಹಿಂಗ್ಯಾ ಜನಾಂಗ ರಾಖೈನ್ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗುವುದಕ್ಕೆ ತೀವ್ರವಾದ ಮಿಲಿಟರಿ ಬಿಕ್ಕಟ್ಟು ಕಾರಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ಬಳಕೆದಾರರೇ ಎಚ್ಚರ..! ಫೇಸ್ ಬುಕ್ ಸ್ನೇಹಿತರಿಂದ ಬೆಂಗಳೂರಿನ ವ್ಯಕ್ತಿಗೆ 5 ಲಕ್ಷ ರೂ ವಂಚನೆ