ಅಪಾರ ಬುದ್ಧಿಮತ್ತೆಯ, ಪ್ರತಿಭಾಶಾಲಿ ಭಾರತೀಯ ಮೂಲದ ಅಮೆರಿಕನ್ ಬಾಲಕನಿಗೆ ಕೇವಲ 12 ವರ್ಷಗಳಾಗಿದ್ದು, ಸಾಕ್ರಮೆಂಟೊ ವಿದ್ಯಾರ್ಥಿ. ಇವನ ಬಳಿ ಈಗಾಗಲೇ ಮೂರು ಕಮ್ಯೂನಿಟಿ ಕಾಲೇಜು ಡಿಗ್ರಿಗಳಿದ್ದು, ಕ್ಯಾಲಿಫೋರ್ನಿಯಾದ ಎರಡು ವಿವಿಗಳಿಗೆ ಪ್ರವೇಶಾವಕಾಶ ಸಿಕ್ಕಿದೆ. ತಾನು ಬಯೋಮೆಡಿಕಲ್ ಎಂಜಿನಿಯರಿಂಗ್ ಓದಿ 18 ವರ್ಷ ತುಂಬುವುದರೊಳಗೆ ವೈದ್ಯಕೀಯ ಸಂಶೋಧಕನಾಗುತ್ತೇನೆ ಎಂದು ಈ ಬಾಲಕ ಕನಸು ಕಂಡಿದ್ದಾನೆ.
ತಾನಿಷ್ಕ್ ಅಬ್ರಾಹಂ ಎಂಬ ಈ ಬಾಲಕನನ್ನು ಯುಸಿ ಡೇವಿಸ್ ಸ್ವೀಕರಿಸಿದೆ ಮತ್ತು ಯುಸಿ ಸಾಂಟಾ ಕ್ರಜ್‌ಗೆ ಕೂಡ ರೀಜೆಂಟ್ಸ್ ವಿದ್ಯಾರ್ಥಿವೇತನ ಸಿಕ್ಕಿದೆ. ಆದರೆ ಯಾವ ವಿವಿಗೆ ಸೇರಬೇಕೆಂದು ಅವನು ನಿರ್ಧರಿಸಬೇಕಿದೆ.
ತಾನಿಷ್ಕ್ ಏಳನೇ ವಯಸ್ಸಿನಲ್ಲೇ ಕಮ್ಯುನಿಟಿ ಕಾಲೇಜಿನಲ್ಲಿ ಓದಲು ಆರಂಭಿಸಿ ಕಳೆದ ವಾರ ಅಮೆರಿಕದ ರಿವರ್ ಕಾಲೇಜಿನಿಂದ ಅಸೋಸಿಯೇಟ್ ಡಿಗ್ರಿ ಪಡೆದಿದ್ದ.
ಬಾಲ ಪ್ರತಿಭೆಗಳನ್ನು ಜನರು ವಿಚಿತ್ರವಾಗಿ ಕಾಣುತ್ತಾರೆ. ಜೀನಿಯಸ್ ಕುರಿತು ಯೋಚಿಸಿದಾಗ ಹುಚ್ಚು ವಿಜ್ಞಾನಿ ಜನರ ಕಲ್ಪನೆಯಲ್ಲಿ ನುಸುಳುತ್ತಾರೆ. ಆದರೆ ತಾನು ಸಾಮಾನ್ಯ ಬಾಲಕನಾಗಿದ್ದು, ನನಗೆ ಕಲಿಕೆ ಮತ್ತು ಮೈಕ್ರೋಸ್ಕೋಪ್‌ಗಳು ಇಷ್ಟ ಜತೆಗೆ ವಿಡಿಯೊ ಗೇಮ್ಸ್ ಆಡುವುದು ಕೂಡ ಇಷ್ಟ ಎಂದು ತಾನಿಷ್ಕ ಹೇಳಿದ್ದಾನೆ.