Publish Date: Sat, 09 Apr 2022 (10:10 IST)
Updated Date: Sat, 09 Apr 2022 (10:25 IST)
ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕನಿಗೆ ಕಪಾಳ ಮೋಕ್ಷ ಮಾಡಿದ್ದ ನಟ ವಿಲ್ ಸ್ಮಿತ್ ಗೆ 10 ವರ್ಷಗಳ ನಿಷೇಧ ಹೇರಲಾಗಿದೆ.
ಪತ್ನಿಯ ಬಗ್ಗೆ ಜೋಕ್ ಮಾಡಿದರೆಂದು ನಿರೂಪಣೆ ಮಾಡುತ್ತಿದ್ದ ಹಾಸ್ಯ ನಟ ಕ್ರಿಸ್ ರಾಕ್ ಗೆ ವೇದಿಕೆಗೇ ಬಂದು ವಿಲ್ ಸ್ಮಿತ್ ಕಪಾಳ ಮೋಕ್ಷ ಮಾಡಿದ್ದರು. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ವಿಪರ್ಯಾಸವೆಂದರೆ ವಿಲ್ ಸ್ಮಿತ್ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿಯನ್ನೂ ಪಡೆದಿದ್ದರು.
ಆದರೆ ವೇದಿಕೆಗೆ ಅಗೌರವ ತೋರಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ‍್ಳಲು ಆಸ್ಕರ್ ಸಮಿತಿ ನಿರ್ಧರಿಸಿತು. ಇನ್ನು 10 ವರ್ಷಗಳ ಕಾಲ ಅವರನ್ನು ಆಸ್ಕರ್ ಪ್ರಶಸ್ತಿಯಿಂದ ನಿಷೇಧಿಸಲಾಗಿದೆ.