Select Your Language

Notifications

webdunia
webdunia
webdunia
webdunia

ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಪ್ರಿಯಾಂಕಾ

ಆಸ್ಕರ್ಸ್ 2017
ಭಾನುವಾರ ರಾತ್ರಿ ಏರ್ಪಾಡಿಸಿದ್ದ ಪ್ರೀ ಆಸ್ಕರ್ ಕಾರ್ಯಕ್ರಮಕ್ಕೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಹಾಜರಾಗಿದ್ದರು. ಎಲ್ಲರ ದೃಷ್ಟಿ ಅವರ ಮೇಲೆ ಇತ್ತು. ಈ ಬಾರಿ ಯಾವ ರೀತಿಯ ಡ್ರೆಸ್‍ನಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ ಎಂಬ ಕುತೂಹಲವೂ ಇತ್ತು.
 
ಕಳೆದ ವರ್ಷ ಶ್ವೇತ ವರ್ಣದ ಗೌನ್ ತೊಟ್ಟು ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಈ ಬಾರಿ ತನ್ನದೇ ಆದಂತಹ ವಿಶೇಷ ಬಟ್ಟೆಯಲ್ಲಿ ಹೆಜ್ಜೆಹಾಕಿದ್ದಾರೆ. ಪ್ರೀ ಆಸ್ಕರ್ ಪಾರ್ಟಿಯಲ್ಲಿ ಗ್ರೇ, ಬಿಳಿ ಬಣ್ಣದ ಗೌನ್‌ನಲ್ಲಿ ಎಲ್ಲರ ಕಣ್ಮನ ಸೆಳೆದಿದ್ದಾರೆ ಪ್ರಿಯಾಂಕಾ. 
 
ಹಾಲಿವುಡ್ ನಟ ಡ್ವೈನ್ ಜಾನ್ಸನ್ ಜತೆಗೆ ಅವರು ಬೇವಾಚ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಅಭಿನಯಿಸಿರುವ ಅಮೆರಿಕನ್ ಸೀರೀಸ್ ’ಕ್ವಾಂಟಿಕೋ’ದಿಂದ ಈಗ ಜಗತ್ತಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಕಳೆದ ಬಾರಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನೂ ವಿತರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಕೆಯ ನೋವಿನ ಬಗ್ಗೆ ಯೋಚಿಸುತ್ತಿದ್ದೇನೆ: ದೀಪಿಕಾ