Select Your Language

Notifications

webdunia
webdunia
webdunia
webdunia

ಆಕೆಯ ನೋವಿನ ಬಗ್ಗೆ ಯೋಚಿಸುತ್ತಿದ್ದೇನೆ: ದೀಪಿಕಾ

ಆಕೆಯ ನೋವಿನ ಬಗ್ಗೆ ಯೋಚಿಸುತ್ತಿದ್ದೇನೆ: ದೀಪಿಕಾ
Mumbai , ಸೋಮವಾರ, 27 ಫೆಬ್ರವರಿ 2017 (17:46 IST)
ಮಲಯಾಳಿ ನಟಿ ಅಪಹರಣ, ಲೈಂಗಿಕ ದೌರ್ಜನ್ಯ ಘಟನೆಗೆಯ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ವ್ಯಕ್ತಿಯಾಗಿ ಈ ಘಟನೆ ನನ್ನನ್ನು ಭಯಭೀತಿಗೊಳಿಸುತ್ತಿದೆ. ಆಕೆಯ ವೃತ್ತಿ ಏನೆಂದು ನಾನು ಆಲೋಚಿಸುತ್ತಿಲ್ಲ. ಆಕೆ ಅನುಭವಿಸಿದ ನೋವಿನ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದಿದ್ದಾರೆ.
 
ನಟಿಗೆ ಈ ರೀತಿ ನಡೆದರೆ ಹೇಗೆ ಎಂಬುದಲ್ಲ ಪ್ರಶ್ನೆ. ಬೆಂಗಳೂರಿನಲ್ಲಿ ನಡೆದ ಘಟನೆ (ಹೊಸ ವರ್ಷ ಸಂಭ್ರಮದಲ್ಲಿ) ನೆನಪಿಸುವಂತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ನಿರಂತರ ಅಪರಾಧಗಳು ನಡೆಯುತ್ತಲೇ ಇವೆ ಎಂದಿದ್ದಾರೆ.
 
ಅಪರಾಧಿಗಳು ಈ ರೀತಿಯ ಅಪರಾಧಗಳನ್ನು ಮಾಡಿ ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ಆಲೋಚಿಸಿದರೆ ಆತಂಕವಾಗುತ್ತದೆ. ಈ ರೀತಿಯ ಘಟನೆಗಳು ನಡೆಯದಂತೆ ತಡೆಯಲು ಇನ್ನೂ ಎಷ್ಟು ಅಪರಾಧಗಳು ನಡೆಯಬೇಕೋ ಏನೋ ಎಂದು ಪ್ರಶ್ನಿಸಿದ್ದಾರೆ ದೀಪಿಕಾ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿಯ ಆಸ್ಕರ್ ಪ್ರಶಸ್ತಿ ವಿಶೇಷಗಳದೆಷ್ಟೋ!