Select Your Language

Notifications

webdunia
webdunia
webdunia
webdunia

ಈ ಬಾರಿಯ ಆಸ್ಕರ್ ಪ್ರಶಸ್ತಿ ವಿಶೇಷಗಳದೆಷ್ಟೋ!

ಈ ಬಾರಿಯ ಆಸ್ಕರ್ ಪ್ರಶಸ್ತಿ ವಿಶೇಷಗಳದೆಷ್ಟೋ!
Mumbai , ಸೋಮವಾರ, 27 ಫೆಬ್ರವರಿ 2017 (17:43 IST)
ಈ ಬಾರಿಯ 89ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲ ಪ್ರಶಸ್ತಿಯನ್ನು ಯಾರೂ ಊಹಿಸದಂತೆ ಉತ್ತಮ ಪೋಷಕ ನಟ ಪ್ರಶಸ್ತಿ ಮೂಲಕ ಆರಂಭಿಸಿದರು. ಕಳೆದ ಎರಡು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರಕಥೆ ವಿಭಾಗದ ಮೂಲಕ ಆರಂಭಿಸಲಾಗಿತ್ತ.
 
ಮೂನ್‌ಲೈಟ್ ಚಿತ್ರದಲ್ಲಿನ ಅಭಿನಯಕ್ಕಾಗಿ ಮಹೇರ್ಷಲಾ ಅಲಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ತಂದೆಯಿಲ್ಲದ ಯುವಕನಾಗಿ ಜುವಾನ್ ಪಾತ್ರದಲ್ಲಿ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ ಅಲಿ. ಆಸ್ಕರ್‌ಗೆ ನಾಮಿನೇಟ್ ಆದ ಮೊದಲ ಸಲವೇ ಪ್ರಶಸ್ತಿ ಪಡೆದಿರುವುದು ಇನ್ನೊಂದು ವಿಶೇಷ.
 
ಇದರ ಜತೆಗೆ ಆಸ್ಕರ್ ಪಡೆದ ಮೊದಲ ಮುಸ್ಲಿಂ ಆಗಿ ಆಲಿ ದಾಖಲೆ ಸೃಷ್ಟಿಸಿದ್ದಾರೆ. ಮೂನ್‌ಲೈಟ್ ಚಿತ್ರಕ್ಕೆ ಬೆರ್ರಿ ಜೆಕಿನ್ಸ್ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ಅಲಿಕಾ ಈ ಪ್ರಶಸ್ತಿಯನ್ನು ಅಲಿಗೆ ಪ್ರದಾನ ಮಾಡಿದರು. ನನ್ನ ಈ ಯಶಸ್ಸಿನಲ್ಲಿ ಪತ್ನಿಯ ಪ್ರೋತ್ಸಾಹ ಸಾಕಷ್ಟಿದೆ ಎಂದು ಅಲಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೀರ್ ಖಾನ್ ಮುಂದಿನ ಚಿತ್ರದ ಗೆಟಪ್ ಇದೇನಾ?