Select Your Language

Notifications

webdunia
webdunia
webdunia
webdunia

ಅಮೀರ್ ಖಾನ್ ಮುಂದಿನ ಚಿತ್ರದ ಗೆಟಪ್ ಇದೇನಾ?

ಅಮೀರ್ ಖಾನ್ ಮುಂದಿನ ಚಿತ್ರದ ಗೆಟಪ್ ಇದೇನಾ?
Mumbai , ಸೋಮವಾರ, 27 ಫೆಬ್ರವರಿ 2017 (17:14 IST)
ಬಾಲಿವುಡ್ ನಟ ಅಮೀರ್ ಖಾನ್ ಮುಂದಿನ ಚಿತ್ರದ ಗೆಟಪ್ ಏನಿರಬಹುದು ಎಂಬ ಚರ್ಚೆ ಅವರ ಅಭಿಮಾನಿ ವಲಯದಲ್ಲಿ ನಡೆಯುತ್ತಿರುತ್ತದೆ. ದಂಗಲ್ ಚಿತ್ರದ ಬಳಿಕ ಅವರು ’ತಗ್ಸ್ ಆಫ್ ಹಿಂದೂಸ್ತಾನ್’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ.
 
ಈ ಚಿತ್ರದಲ್ಲಿ ಅವರು ಯಾವ ರೀತಿ ಕಾಣಿಸಲಿದ್ದಾರೆ ಎಂಬ ಬಗ್ಗೆ ಈಗಾಗಲೆ ಕುತೂಹಲ ಮೂಡಿದೆ. ಅದಕ್ಕೆ ತಕ್ಕಂತೆ ಅಮೀರ್ ಖಾನ್ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅವರು ಮಾತನಾಡುತ್ತಾ, ಯಶಸ್ಸು ಒಬ್ಬ ಹುಡುಗನಿಂದಲೋ, ಹುಡುಗಿಯಿಂದಲೋ ಬರುವುದಿಲ್ಲ..ಸರಿಯಾದ ಆಲೋಚನೆಯಿಂದ ಯಶಸ್ಸು ಸಿಗುತ್ತದೆ ಎಂದಿದ್ದಾರೆ.
 
ಈ ಜಾಹೀರಾತಿನಲ್ಲಿ ಅಮೀರ್ ಖಾನ್ ಸರ್ದಾರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತಗ್ಸ್ ಆಫ್ ಹಿಂದೂಸ್ತಾನ್ ಎಂಬ ಚಿತ್ರದ ಗೆಟಪ್ ಇದೇ ಎನ್ನಲಾಗಿದೆ. ಆದರೆ ಇದು ಜಾಹೀರಾತಿನ ಲುಕ್ ಅಷ್ಟೇ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಲಾ ಲಾ ಲ್ಯಾಂಡ್’ಗೆ ಬದಲಾಗಿ ’ಮೂನ್ ಲೈಟ್’ಗೆ ಪ್ರಶಸ್ತಿ