ಬಣ್ಣದ ಜಗತ್ತಿನಲ್ಲಿರುವವರು ಒಮ್ಮೆಯಾದರೂ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಬೇಕೆಂಬ ಕನಸು ಕಾಣುತ್ತಿರುತ್ತಾರೆ. ಅದಕ್ಕಾಗಿ ಹಗಲು ರಾತ್ರಿ ಶ್ರಮಿಸಿ ಸಿನಿಮಾಗಳನ್ನು ತೆರೆಗೆ ತರುವವರೆಷ್ಟೋ. ಎಷ್ಟೇ ಪ್ರಶಸ್ತಿಗಳನ್ನು ಗೆದ್ದರೂ ಆಸ್ಕರ್ ಸಿಗದೆ ಆ ಪಟ್ಟಿ ಸಂಪೂರ್ಣವಾಗುವುದಿಲ್ಲ.
ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದರೂ ಸಾಕು, ಪ್ರಶಸ್ತಿ ಬಂದಷ್ಟೇ ಸಂಭ್ರಮಿಸುತ್ತಾರೆ. ಇನ್ನು ಪ್ರಶಸ್ತಿ ಸಿಕ್ಕಿಬಿಟ್ಟರಂತೂ ಆ ಸಂಭ್ರಮಕ್ಕೆ ಎಲ್ಲೆಇರುವುದಿಲ್ಲ. ಚಿತ್ರವೊಂದಕ್ಕೆ ಪ್ರಶಸ್ತಿ ಪ್ರಕಟಿಸಿದ ಬಳಿಕ ತಪ್ಪಾಗಿದೆ ಎಂದರೆ ಒಮ್ಮೆಲೆ ಆಸೆಯ ಬಲೂನು ಠುಸ್ ಎನ್ನುತ್ತದೆ. 89ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲೂ ಆ ರೀತಿಯ ಪ್ರಮಾದ ಆಗಿದೆ. ಲಾ ಲಾ ಲ್ಯಾಂಡ್ ಚಿತ್ರತಂಡ ಒಮ್ಮೆಲೆ ನಿರಾಸೆಗೆ ಗುರಿಯಾಗಬೇಕಾಯಿತು.
ಇಷ್ಟಕ್ಕೂ ಏನಾಯಿತು?
ಅದಾಗಲೇ ಎಲ್ಲಾ ಪ್ರಮುಖ ಪ್ರಶಸ್ತಿಗಳನ್ನು ಪ್ರಕಟಿಸಿಯಾಗಿತ್ತು. ಲಾ ಲಾ ಲ್ಯಾಂಡ್ ಖಾತೆಯಲ್ಲಿ ಉತ್ತಮ ನಿರ್ದೇಶಕ, ಉತ್ತಮ ನಟಿ ಸೇರಿದಂತೆ ಇನ್ನೂ ನಾಲ್ಕು ಪ್ರಶಸ್ತಿಗಳು ಜಮೆಯಾಗಿದ್ದವು. ಎಲ್ಲರೂ ಕುತೂಹಲವಾಗಿ ಅತ್ಯುತ್ತಮ ಚಿತ್ರದ ನಿರೀಕ್ಷೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಲಾ ಲಾ ಲ್ಯಾಂಡ್ ಚಿತ್ರ ಎಂದು ಪ್ರಕಟಿಸಿದರು.
ಇದರಿಂದ ಆ ಚಿತ್ರತಂಡ ಖುಷಿಯಿಂದ ಕುಣಿದಾಡಿತು. ಎಲ್ಲರೂ ಒಮ್ಮೆ ವೇದಿಕೆಗೆ ಆಗಮಿಸಿದರು. ಆದರೆ ಅದಾದಲೆ ಎಡವಟ್ಟಾಗಿತ್ತು. ಕೂಡಲೆ ಗಮನಿಸಿದ ಕಾರ್ಯಕ್ರಮ ನಿರ್ವಾಹಕರು ಅಸಲಿ ವಿಚಾರ ತಿಳಿಸಿದರು. ಮೂನ್ ಲೈಟ್ ಚಿತ್ರ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆಯೆಂದು, ಕವರ್ ಅದಲು ಬದಲಾದ ಕಾರಣ ತಪ್ಪಾಗಿ ಪ್ರಕಟಿಸಲಾಗಿದೆ ಎಂದು ವಿವರಣೆ ನೀಡಿದರು. ಕೂಡಲೆ ಮೂನ್ ಲೈಟ್ ಚಿತ್ರತಂಡ ವೇದಿಕೆಗೆ ಆಗಮಿಸಿದೆ. ಲಾ ಲಾ ಲ್ಯಾಂಡ್ ಚಿತ್ರತಂಡ ಆ ಚಿತ್ರಕ್ಕ ಶುಭಾಶಯ ತಿಳಿಸಿ ಕೆಳಗಿಳಿಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.