Select Your Language

Notifications

webdunia
webdunia
webdunia
webdunia

ಅತೀಯಾದ ಮಾದಕ ವಸ್ತು ಸೇವನೆಯೇ ವಯಸ್ಕ ಚಲನಚಿತ್ರ ತಾರೆ ಕೈಲಿ ಸಾವಿಗೆ ಕಾರಣವಾಯಿತೇ

ಕೈಲಿ ಪೇಜ್ ಇನ್ನಿಲ್ಲ

Sampriya

ಅಮೆರಿಕಾ , ಗುರುವಾರ, 3 ಜುಲೈ 2025 (16:45 IST)
Photo Credit X
ನೆಟ್‌ಫ್ಲಿಕ್ಸ್‌ ಮತ್ತು ವಯಸ್ಕ ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದ 28ವರ್ಷದ ಖ್ಯಾತ ನಟಿ ಕೈಲಿ ಪೇಜ್‌ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ಮಾದಕ ವಸ್ತುವನ್ನು ಮಿತಿಮೀರಿ ಸೇವಿಸಿದ್ದೆ ಅವರ ಸಾವಿಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಆಕೆಯ ಸ್ನೇಹಿತರೊಬ್ಬರು ಕೈಲಿ ಕರೆಗೆ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಅಗ್ನಿ ಶಾಮಕದವರು LA ಅಪಾರ್ಟ್ಮೆಂಟ್‌ನಲ್ಲಿ ಆಕೆಯ ಮನೆಯನ್ನು ತೆರೆದು ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ. 

ಲಾಸ್ ಏಂಜಲೀಸ್ ಕಾನೂನು ಜಾರಿ ಅಧಿಕಾರಿಗಳು ಕೈಲೀ ಪೇಜ್‌ನ ಕೋಣೆಯಲ್ಲಿ ಫೆಂಟನಿಲ್ ಮತ್ತು ಡ್ರಗ್ ಸಾಮಗ್ರಿಗಳನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.

ಆದಾಗ್ಯೂ, ಕೈಲಿ ಪೇಜ್ ಅವರ ಸಾವಿಗೆ ಯಾವುದೇ ಅಧಿಕೃತ ಕಾರಣವನ್ನು ಇನ್ನೂ ನೀಡಲಾಗಿಲ್ಲ ಎಂದು ಲಾಸ್ ಏಂಜಲೀಸ್ ಕೌಂಟಿ ಮೆಡಿಕಲ್ ಎಕ್ಸಾಮಿನರ್ ಹೇಳಿದ್ದಾರೆ.

ಅಧಿಕಾರಿಗಳು ಕೊಠಡಿಯ ಸುತ್ತಲೂ ವಿವಿಧ ಪುರುಷರೊಂದಿಗೆ ಕೈಲಿ ಜತೆಗಿರುವ ಫೋಟೋ ಹರಿಡುವುದನ್ನು ಪತ್ತೆಹಚ್ಚಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಾಯಣ ಟೀಸರ್ ರಿಲೀಸ್: ರಾವಣನಾಗಿ ಯಶ್ ಲುಕ್ ಇಲ್ಲಿದೆ ವಿಡಿಯೋ ನೋಡಿ