ಬೆಂಗಳೂರು: ಜನನಾಂಗದ ಸುತ್ತ ದಟ್ಟವಾಗಿ ಬೆಳೆಯುವ ಕೂದಲುಗಳನ್ನು ತೆಗೆಯುವುದರಿಂದ ಅಪಾಯವಿದೆಯೇ ಎಂಬ ಬಗ್ಗೆ ಹಲವರಿಗೆ ಹಲವು ಅನುಮಾನಗಳಿವೆ.
ಕೂದಲು ಕತ್ತರಿಸುವುದರಿಂದ ಜನನಾಂಗದ ಸೋಂಕು, ಬಿಳಿ ಸೆರಗು ಇತ್ಯಾದಿ ಸಮಸ್ಯೆಗಳು ಕಂಡುಬರುತ್ತದೆಯೇ? ನಿಜವಾಗಿ ಕೂದಲು ಕತ್ತರಿಸುವಾಗ ಶುಚಿತ್ವದ ಬಗ್ಗೆ ಗಮನಕೊಡಬೇಕು. ಅದರಲ್ಲೂ ರೇಜರ್ ಬಳಸಿ ಕೂದಲು ತೆಗೆಯುತ್ತಿದ್ದರೆ ಪ್ರತೀ ಬಾರಿ ಹೊಸ ಬ್ಲೇಡ್ ಬಳಸಬೇಕು.
ಇಲ್ಲವಾದರೆ ಜನನಾಂಗದ ಸೋಂಕು ಸಮಸ್ಯೆ ಕಂಡುಬರಬಹುದು. ಇದು ಲೈಂಗಿಕ ಜೀವನಕ್ಕೂ ಕುತ್ತು ತರಬಹುದು. ಜನನಾಂಗದ ಸೋಂಕು ಸಂಗಾತಿಗೂ ಹರಡುವ ಅಪಾಯವಿದೆ. ಹೀಗಾಗಿ ಕೂದಲು ತೆಗೆಯುವಾಗ ಶುಚಿತ್ವದ ಬಗ್ಗೆ ಗಮನಕೊಡುವುದು ಅಗತ್ಯ.